Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಪ್ರತಿಭಟನೆ ಉಲ್ಪಣ: ಮೊದಲು ಕ್ಷಮೆ ಕೇಳಿ, ಆ ಬಳಿಕವೇ ಸಂಧಾನ, ದೀದಿಗೆ ವೈದ್ಯರ ತಾಕೀತು

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರ ಉಲ್ಬಣಗೊಂಡಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರು ನೀಡಿದ್ದ ಸಂಧಾನಸಭೆ ಆಹ್ವಾನವನ್ನು ಪ್ರತಿಭಟನಾ ನಿರತ ವೈದ್ಯರು ನಾಜೂಕಾಗಿ ತಿರಸ್ಕರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರತಿಭಟನಾ ನಿರತ ವೈದ್ಯರ ವಕ್ತಾರ ಅರಿಂದಮ್ ದತ್ತಾ ಅವರು, ಸಿಎಂ ಮಮತಾ ಬ್ಯಾನರ್ಜಿ ಅವರು ಸಂಧಾನಸಭೆ ಕರೆದಿರುವುದು ಒಳ್ಳೆಯ ವಿಚಾರವೇ.. ನಾವೂ ಕೂಡ ಸಚಿವಾಲಯಕ್ಕೆ ತೆರಳಿ ಸಂಧಾನಸಭೆಯಲ್ಲಿ ಮಾತನಾಡುತ್ತೇವೆ. ಆದರೆ ಅದಕ್ಕಿಂತ ಮೊದಲು ಮಮತಾ ಬ್ಯಾನರ್ಜಿ ಅವರು, ನಿಲ್ ರತನ್ ಸರ್ಕಾರ್ ವೈದ್ಯಕೀಯ ಕಾಲೇಜಿಗೆ ಬಂದು ವೈದ್ಯರನ್ನು ಉದ್ದೇಶಿಸಿ ಬೇಷರತ್ ಕ್ಷಮೆ ಕೇಳಬೇಕು. ಆಗ ನಾವು ಸಂಧಾನ ಸಭೆಗೆ ಬರುತ್ತೇವೆ ಎಂದು ಹೇಳಿದ್ದಾರೆ.

 

 

ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಅವರು ವೈದ್ಯರನ್ನು ಉದ್ದೇಶಿಸಿ ಆಡಿದ್ದ ಮಾತುಗಳು ಸರಿಯಲ್ಲ. ಅವರು ಎಸ್ ಎಸ್ ಕೆಎಂ ಆಸ್ಪತ್ರೆಗೆ ಹೋಗುತ್ತಾರೆ ಎಂದಾದರೆ ಖಂಡಿತಾ ಎನ್ ಆರ್ ಎಸ್ ಆಸ್ಪತ್ರೆಗೂ ಬರಬಹುದು. ಒಂದು ವೇಳೆ ಅವರು ಬರದೇ ಇದ್ದರೆ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಅರಿಂದಮ್ ದತ್ತಾ ಹೇಳಿದ್ದಾರೆ.

ಶುಕ್ರವಾರ ಕೋಲ್ಕತ್ತಾದ ಎಸ್ಎಸ್ ಕೆಎಂ ಆಸ್ಪತ್ರೆಗೆ ತೆರಳಿದ್ದ ಸಿಎಂ ಮಮತಾ ಬ್ಯಾನರ್ಜಿ, ‘ವೈದ್ಯರನ್ನು ಸಂಧಾನಕ್ಕೆ ಕರೆದರೆ ಅವರು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಆದರೂ ನಾನು ಅವರನ್ನು ಕ್ಷಮಿಸಿದ್ದೇನೆ. ಪ್ರತಿಭಟನೆ ಮಾಡುತ್ತಿರುವ ವೈದ್ಯರೆಲ್ಲ ಬಂಗಾಳದವರಲ್ಲ. ಅವರೆಲ್ಲ ಹೊರಗಿನಿಂದ ಬಂದವರು. ರಾಜ್ಯದಲ್ಲಿ ಶಾಂತಿ ಕದಡಲು ಬಿಜಿಪಿ ಮತ್ತು ಸಿಪಿಎಂ ಮಾಡುತ್ತಿರುವ ಕುತಂತ್ರ ಇದು” ಎಂದು ಆರೋಪಿಸಿದ್ದರು.

No Comments

Leave A Comment