Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಗುಜರಾತ್‌ನ ವಡೋದರದಲ್ಲಿ ಮ್ಯಾನ್‌ ಹೋಲ್‌ ಕ್ಲೀನ್‌ ಮಾಡಲು ಇಳಿದ 7 ಮಂದಿ ದಾರುಣ ಸಾವು

ವಡೋದರ : ಗುಜರಾತಿನ ವಡೋದರದ ಹೊಟೇಲ್‌ ಒಂದರ ಗಟಾರವನ್ನು ಕ್ಲೀನ್‌ ಮಾಡಲು ಮ್ಯಾನ್‌ ಹೋಲ್‌ಗೆ ಇಳಿದಿದ್ದ ನಾಲ್ವರು ಶೌಚ ಕಾರ್ಮಿಕರ ಸಹಿತ ಒಟ್ಟು ಏಳು ಮಂದಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ಇಂದು ಶನಿವಾರ ನಡೆದಿದೆ.

ವಡೋದರದಿಂದ ಸುಮಾರು 30 ಕಿ.ಮೀ. ದೂರದ ದಾಭೋಯಿ ತೆಹಶೀಲ್‌ನ ಫಾರ್ತಿಕುಯಿ ಗ್ರಾಮದಲ್ಲಿನ ಹೊಟೇಲ್‌ ಮ್ಯಾನ್‌ಹೋಲ್‌ನಲ್ಲಿ ಈ ದುರ್ಘ‌ಟನೆ ನಡೆದಿದೆ. ಏಳು ಮಂದಿ ಮೃತರಲ್ಲಿ ಮೂವರು ಹೊಟೇಲ್‌ ಕಾರ್ಮಿಕರೇ ಆಗಿದ್ದಾರೆ.

ಮ್ಯಾನ್‌ ಹೋಲ್‌ಗೆ ಇಳಿದ ಒಬ್ಬ ಶೌಚ ಕಾರ್ಮಿಕನಿಗೆ ಹೊರ ಬರಲು ಅಸಾಧ್ಯವಾದಾಗ ಉಳಿದವರು ಮ್ಯಾನ್‌ ಹೋಲ್‌ ಒಳಗೆ ಹೋದರು. ಪರಿಣಾಮವಾಗಿ ಎಲ್ಲರೂ ಉಸಿರುಗಟ್ಟಿ ಸತ್ತರು ಎಂದು ಜಿಲ್ಲಾಧಿಕಾರಿ ಕಿರಣ್‌ ಝವೇರಿ ತಿಳಿಸಿದರು.

No Comments

Leave A Comment