Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಲವ್‍ಸ್ಟೋರಿಗೆ ಮರಳಿದ ಪವನ್ ಒಡೆಯರ್ ಇಶಾನ್‍ಗೆ ಆಶಿಕಾ ಜೋಡಿ

“ನಟಸಾರ್ವಭೌಮ’ ಚಿತ್ರದ ನಂತರ ನಿರ್ದೇಶಕ ಪವನ್‌ ಒಡೆಯರ್‌ ಏನು ಮಾಡುತ್ತಿದ್ದಾರೆಂಬ ಕುತೂಹಲ ಅನೇಕರಿಗಿತ್ತು. ಏಕೆಂದರೆ ಯಾವ ಸಿನಿಮಾವನ್ನು ಪವನ್‌ ಅನೌನ್ಸ್‌ ಮಾಡಿರಲಿಲ್ಲ. ಈಗ ಪವನ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಹೊಸ ಸಿನಿಮಾ ಮೂಲಕ. ಇಶಾನ್‌ ನಾಯಕರಾಗಿರುವ ಸಿನಿಮಾವನ್ನು ಪವನ್‌ ನಿರ್ದೇಶಿಸುತ್ತಾರೆಂದು ಸುದ್ದಿ ಇತ್ತಾದರೂ ಅದು ಅಂತಿಮವಾಗಿರಲಿಲ್ಲ. ಈಗ ಬಹುತೇಕ ಎಲ್ಲವೂ ಅಂತಿಮವಾಗಿದ್ದು, ಜುಲೈನಲ್ಲಿ ಚಿತ್ರ ಸೆಟ್ಟೇರಲಿದೆ.

ಈ ಬಾರಿ ಪವನ್‌ ಲವ್‌ಸ್ಟೋರಿಯತ್ತ ಮರಳಿದ್ದಾರೆ. “ಗೂಗ್ಲಿ’ ಚಿತ್ರದಲ್ಲಿ ಅಪ್ಪಟ ಲವ್‌ಸ್ಟೋರಿಯನ್ನು ಕಟ್ಟಿಕೊಟ್ಟಿದ್ದ ಪವನ್‌ ಆ ಚಿತ್ರದ ಮೂಲಕ ಯಶಸ್ಸು ಕೂಡಾ ಕಂಡಿದ್ದರು. ಆ ನಂತರ ಲವ್‌ಸ್ಟೋರಿಯಿಂದ ದೂರವಿದ್ದು, ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸಿದ ಪವನ್‌ ಈಗ ಮತ್ತೆ ಲವ್‌ಸ್ಟೋರಿಗೆ ಮರಳಿದ್ದಾರೆ. ಈ ಚಿತ್ರದ ಮೂಲಕ ಇಶಾನ್‌ ಲವರ್‌ಬಾಯ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.

“ಗೂಗ್ಲಿ ನಂತರ ನಾನು ಲವ್‌ಸ್ಟೋರಿ ಮಾಡಿರಲಿಲ್ಲ. ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸುತ್ತಿದ್ದ ನನಗೆ ಅನೇಕರು, “ನೀವು ಮತ್ತೆ ಲವ್‌ಸ್ಟೋರಿ ಮಾಡಿ, ನಿಮ್ಮ ಲವ್‌ಸ್ಟೋರಿ ತುಂಬಾ ಚೆನ್ನಾಗಿರುತ್ತೆ’ ಎನ್ನುತ್ತಿದ್ದರು. ಹಾಗಾಗಿ, ಈ ಬಾರಿ ಒಂದು ಲವ್‌ಸ್ಟೋರಿ ಮಾಡಲು ಮುಂದಾಗಿದ್ದೇನೆ. ಈಗಾಗಲೇ ಕೆಲಸಗಳು ಜೋರಾಗಿ ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈನಲ್ಲಿ ಚಿತ್ರ ಸೆಟ್ಟೇರಬಹುದು’ ಎನ್ನುವುದು ಪವನ್‌ ಮಾತು.

ಈ ಚಿತ್ರವನ್ನು ಸಿ.ಆರ್‌.ಮನೋಹರ್‌ ನಿರ್ಮಿಸುತ್ತಿದ್ದಾರೆ. ಎಲ್ಲಾ ಓಕೆ, ಇಶಾನ್‌ಗೆ ನಾಯಕಿ ಯಾರು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಉತ್ತರ ಆಶಿಕಾ ರಂಗನಾಥ್‌. ಹೌದು, ಪವನ್‌ ಒಡೆಯರ್‌ ಹೊಸ ಚಿತ್ರದಲ್ಲಿ ಆಶಿಕಾ ರಂಗನಾಥ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಆಶಿಕಾ ಅಕೌಂಟ್‌ಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ. ಚಿತ್ರದ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

No Comments

Leave A Comment