
ಬೆಂಗಳೂರಿನಲ್ಲಿ ಇನ್ನೊಬ್ಬ ವಂಚಕ ಅರೆಸ್ಟ್! ಇಂಜಾಝ್ ಬಿಲ್ಡರ್ಸ್ ನಿರ್ದೇಶಕ ಸಿಸಿಬಿ ಪೋಲೀಸರ ಬಲೆಗೆ
ಬೆಂಗಳೂರು: ಎರಡು ತಿಂಗಳ ಹಿಂದೆ ತನ್ನ ಹೂಡಿಕೆದಾರರಿಗೆ 90 ಕೋಟಿ ರೂ. ವಂಚಿಸಿ ಪರಾರಿಯಾಗಿದ್ದ ಇಂಜಾಝ್ ಬಿಲ್ಡರ್ಸ್ ಸಂಸ್ಥಾಪಕ ನಿರ್ದೇಶಕ ಮಿಸ್ಬಾ ಮುಕರ್ರಮ್ ಅನ್ನು ಬೆಂಗಳೂರು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಈತ ರಿಯಲ್ ಎಸ್ಟೇಟ್ ಮತ್ತು ವೈಮಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ.
ಇನ್ನೊಂದೆಡೆ ಹೊಸದಾಗಿ ರೂಪುಗೊಂಡ ಎಸ್ ಐಟಿ ತಂಡ ಐಎಂಎ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಹುಡುಕುತ್ತಿದೆ. “ಇನ್ಸ್ ಪೆಕ್ಟರ್ ಯತಿರಾಜ್ ನೇತೃತ್ವದ ಸಿಸಿಬಿ ತಂಡ ಕಳೆದ ರಾತ್ರಿ ಮುಕರ್ರಮ್ ನನ್ನು ಬಂಧಿಸಿದೆ. ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆತ ಹಲವಾರು ಜನರಿಗೆ ಹಲಾಲ್ ಹಣದ ಹೆಸರಿನಲ್ಲಿ ವಂಚಿಸಿದ್ದನು ಎಂದು ಆರೋಪ ಕೇಳಿಬಂದಿದೆ.” ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಅಪರಾಧ ದಳ) ಅಲೋಕ್ ಕುಮಾರ್ ಹೇಳಿದ್ದಾರೆ.
