
ಕಡಬ:ಕೆಎಸ್ಆರ್ಟಿಸಿ ಢಿಕ್ಕಿಯಾಗಿ ಪಲ್ಸರ್ನಲ್ಲಿದ್ದ ವಿದ್ಯಾರ್ಥಿ ಸಾವು
ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ನಡುವಿನ ರಾಜ್ಯ ಹೆದ್ದಾರಿಯ ಬಲ್ಯ ಎಂಬಲ್ಲಿ ಗುರುವಾರ ಬೆಳಗ್ಗೆ ಕೆಎಸ್ಆರ್ಟಿಸಿ ಬಸ್ಸೊಂದು ಬೈಕ್ಗೆ ಢಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.
ಮೃತ ಬೈಕ್ ಸವಾರ ಸುಬ್ರಹ್ಮಣ್ಯದ ಪದವಿ ಕಾಲೇಜಿನ ವಿದ್ಯಾರ್ಥಿ ಮೋಕ್ಷಿತ್(21) ಎನ್ನುವವನಾಗಿದ್ದಾನೆ. ಬಲ್ಯದ ಮದ್ರಾಡಿಯ ನಿವಾಸಿ ರಾಮಚಂದ್ರ ಗೌಡ ಅವರ ಪುತ್ರ ಎಂದು ತಿಳಿದು ಬಂದಿದೆ.
ಬಲ್ಯದಿಂದ ಕಡಬದತ್ತ ತೆರಳುತ್ತಿದ್ದ ವೇಳೆ ಬಸ್ ಢಿಕ್ಕಿಯಾಗಿದೆ.
ಕಡಬ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.