Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಗಂಗಾ ಸ್ನಾನಕ್ಕೆ ಇಳಿದ ಒಂದೇ ಕುಟುಂಬದ ಏಳು ಮಂದಿಯ ದಾರುಣ ಸಾವು

ಅಮ್‌ರೋಹಾ : ಉತ್ತರ ಪ್ರದೇಶದ ಅಮ್‌ರೋಹಾ ಜಿಲ್ಲೆಯಲ್ಲಿನ ಬ್ರಿಜ್‌ಘಾಟ್‌ ನಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಲು ಇಳಿದ ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ಏಳು ಮಂದಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ನಿನ್ನೆ ಸೋಮವಾರ ಈ ದುರ್ಘ‌ಟನೆ ನಡೆದುದನ್ನು ಅನುಸರಿಸಿ ಐದು ಮೃತ ದೇಹಗಳನ್ನು ಮೇಲೆತ್ತಲಾಗಿದೆ; ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಇಂದು ಮಂಗಳವಾರ ತಿಳಿಸಿದ್ದಾರೆ.

ಈ ಕುಟುಂಬ ಲುಹಾರಿ ಗ್ರಾಮದ್ದಾಗಿದ್ದು ಮೃತರ ಹೆಸರು ಇಂತಿದೆ : ಬಂಟಿ 21, ಸಂಜೀವ್‌ 18, ವಿಪಿನ್‌ 21, ಮನೋಜ್‌ 20, ಸಂಜೀವ 17. ನಾಪತ್ತೆಯಾಗಿರುವವರು : ಗೌತಮ್‌ 20, ಧರ್ಮೇಂದ್ರ 16.

ಈ ಕುಟುಂಬದ ಸದಸ್ಯರು ಕೇಶ ಮುಂಡನದ ಬಳಿಕ ಗಂಗಾ ಸ್ನಾನಕ್ಕಾಗಿ ನದಿಗೆ ಇಳಿದಿದ್ದರು. ಆಗ ಇಬ್ಬರು ಆಕಸ್ಮಿಕವಾಗಿ ಒಡನೆಯೇ ಮುಳುಗಿದರು; ಅವರನ್ನು ಬದುಕಿಸಲು ಉಳಿದವರು ನದಿಗೆ ಹಾರಿದರು ಎಂದು ಸರ್ಕಲ್‌ ಆಫೀಸರ್‌ ಮೋನಿಕಾ ಯಾದವ್‌ ತಿಳಿಸಿದರು.

No Comments

Leave A Comment