Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಪೊಲೀಸ್‌ ಶಿಬಿರಕ್ಕೆ ಭೂಮಿ ಕೊಟ್ಟ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ನಕ್ಸಲರು

ರಾಯಪುರ : ಪೊಲೀಸರಿಗೆ ಶಿಬಿರ ಹಾಕಲು ತನ್ನ ಭೂಮಿಯನ್ನು ಕೊಟ್ಟನೆಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ನಕ್ಸಲರು ಗುಂಡಿಕ್ಕಿ ಕೊಂದ ಘಟನೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ನಡೆದಿದೆ.

ಕಂಕೇರ್‌ ಜಿಲ್ಲೆಯ ಚರಮಾ ಎಂಬಲ್ಲಿನ ದೇವೇಂದ್ರ ಕುಮಾರ್‌ ಸಿನ್ಹಾ ಮತ್ತು ಆತನ ಮಗ, ಬಡೇತೇವಡಾ ಗ್ರಾಮದಲ್ಲಿನ ತನ್ನ ಕೃಷಿ ಭೂಮಿಗೆ ಹೋಗಿದ್ದಾಗ ಸುಮಾರು ಒಂದು ಡಜನ್‌ ನಕ್ಸಲರು ಅಲ್ಲಿಗೆ ಬಂದರು.

ಅಪ್ಪ-ಮಗನನ್ನು ಬಲವಂತವಾಗಿ ಸಮೀಪದ ಅರಣ್ಯಕ್ಕೆ ಒಯ್ದು ನಕ್ಸಲರು ಅಲ್ಲಿ ದೇವೇಂದರ್‌ ಅವರನ್ನು ಗುಂಡಿಕ್ಕಿ ಕೊಂದರು. ಪೊಲೀಸರಿಗೆ ತಿಳಿಸಿದರೆ ಜೋಕೆ ಎಂಬ ಎಚ್ಚರಿಕೆಯನ್ನು ಕೊಟ್ಟು ಆತನ ಮಗನಿಗೆ ಹೋಗಲು ಬಿಟ್ಟರು ಎಂದು ಪೊಲೀಸರು ತಿಳಿಸಿದರು.

ಅರಣ್ಯದಿಂದ ಗುಂಡಿನ ಸದ್ದು ಕೇಳಿ ಬಂದಾಗ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ನಕ್ಸಲರು ಅದಾಗಲೇ ಸ್ಥಳದಿಂದ ಪರಾರಿಯಾಗಿದ್ದರು.

No Comments

Leave A Comment