Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಉಡುಪಿಯಲ್ಲಿ ಮಂಡೂಕ ಕಲ್ಯಾಣೋತ್ಸವ ಸಂಪನ್ನ ಮಳೆ ತರಲಿದೆಯೇ ಹೊಸ ಜೋಡಿ …

ಉಡುಪಿ: ಮೆರವಣಿಗೆ ವಾದ್ಯ ಘೋಷಗಳೊಂದಿಗೆಆಗಮಿಸಿದ ಮಂಡೂಕಜೋಡಿಗೆ ಕಲ್ಯಾಣ ಶನಿವಾರ ಮಧ್ಯಾಹ್ನ12.05ಕ್ಕೆ ಉಡುಪಿ ಖಾಸಗಿ ಹೊಟೇಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಸಂಪನ್ನಗೊಂಡಿದೆ.

ಬೆಳಗ್ಗೆ 11ಕ್ಕೆ ಮಾರುತಿ ವೀಥಿಕಾದಲ್ಲಿರುವ ನಾಗರಿಕ ಸಮಿತಿಯ ಕಚೇರಿಯಿಂದ ಹೊರಟ ದಿಬ್ಬಣ ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಲ್ಯಾಣ ಮಂಟಪಕ್ಕೆ ಸಾಗಿ ಬಂದಿತು.

ಮಳೆಯ ಕೊರತೆ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ವಿವಿಧೆಡೆ ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಅದರೊಂದಿಗೆ ಶನಿವಾರ ‘ಮಂಡೂಕ ಪರಿಣಯ'(ಕಪ್ಪೆ ಮದುವೆ) ನಡೆಸಲಾಗಿದೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್‌ ಮತ್ತು ಪಂಚರತ್ನಾ ಸೇವಾ ಟ್ರಸ್ಟ್‌ ಈ ಬಾರಿಯ ಕಪ್ಪೆ ಮದುವೆ ಆಯೋಜನೆ ಮಾಡಿತ್ತು.

ಹೆಣ್ಣು ಕಪ್ಪೆಯನ್ನು ಕೊಳಲಗಿರಿ ಕೀಳಿಂಜೆಯಿಂದ ಹಾಗೂ ಗಂಡು ಕಪ್ಪೆಯನ್ನು ಉಡುಪಿ ಕಲ್ಸಂಕದಿಂದ ತರಲಾಗಿತ್ತು. ಹೆಣ್ಣು ಕಪ್ಪೆಗೆ ವರ್ಷಾ ಎಂದೂ, ಗಂಡು ಕಪ್ಪೆಗೆ ವರುಣ ಎಂದೂ ನಾಮಕರಣ ಮಾಡಲಾಗಿತ್ತು. ಮಳೆಗಾಗಿ ಪ್ರಾರ್ಥನೆಯೇ ಉಡುಗೊರೆ ಎಂಬ ಒಕ್ಕಣೆ ಮದುವೆ ಆಮಂತ್ರಣ ಪತ್ರಿಕೆಯಲ್ಲಿತ್ತು.

ಕಪ್ಪೆಗಾಗಿ ಹುಡುಕಾಟ
ಕಪ್ಪೆಗಳ ಸಂತತಿ ಕಡಿಮೆಯಾಗಿರುವುದರಿಂದ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರು ಕಪ್ಪೆಗಳನ್ನು ತರಲು ಒಂದು ವಾರಗಳ ಕಾಲ ಹುಡುಕಾಟ ನಡೆಸಿದ್ದಾರೆ. ಅನಂತರ ಅವುಗಳನ್ನು ಪ್ರಸಿದ್ಧ ಆಸ್ಪತ್ರೆಯ ಲ್ಯಾಬ್‌ನಲ್ಲಿ ಪರೀಕ್ಷೆಗೊಳಪಡಿಸಿ ಗಂಡು ಯಾವುದು, ಹೆಣ್ಣು ಯಾವುದು ಎಂಬುದನ್ನು ಗುರುತಿಸಿದ್ದಾರೆ.

ಈ ಹಿಂದೆಯೂ ಒಳಕಾಡು ಅವರು ಮಳೆ ಕೊರತೆ ಕಾಣಿಸಿಕೊಂಡಾಗ ಕಪ್ಪೆಗಳಿಗೆ ಮದುವೆ ಮಾಡಿಸಿದ್ದರು.

No Comments

Leave A Comment