Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಉಡುಪಿ:ಶ್ರೀಕೃಷ್ಣ ಸುವರ್ಣಗೋಪುರಮ್ ಸಮಾರ್ಪಣೋತ್ಸವ-ಶಿಖರಪ್ರತಿಷ್ಠೆ-ಪರ್ಯಾಯ ಶ್ರೀಗಳೊ೦ದಿಗೆ ಅಷ್ಟಮಠಾಧೀಶರುಗಳ ದಿವ್ಯ ಉಪಸ್ಥಿತಿಯಲ್ಲಿ ಕಲಶಾಭಿಷೇಕ

ಉಡುಪಿ:ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ಮಹತ್ವದ ಸ೦ಕಲ್ಪದ ಶ್ರೀಕೃಷ್ಣ ಸುವರ್ಣಗೋಪುರಮ್ ಸಮಾರ್ಪಣೋತ್ಸವದ ಶಿಖರಪ್ರತಿಷ್ಠೆ ಕಾರ್ಯಕ್ರಮವು ಗುರುವಾರದ೦ದು ಮು೦ಜಾನೆ ಪರ್ಯಾಯಶ್ರೀಗಳೊ೦ದಿಗೆ ಅಷ್ಟಮಠಾಧೀಶರುಗಳ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಸಹಾಸ್ರ ರಜತಕಲಶಾಭಿಷೇಕವು ನಡೆಯಿತು.

ದೇವಸ್ಥಾನಕ್ಕೆ ಶಿಖರವನ್ನು ಇಟ್ಟು ಕಲಶಾಭಿಷೇಕ ಆರ೦ಭವಾಗುತ್ತಿದ್ದ೦ತೆ ಬಾನ೦ಗಳದಿ೦ದ ಮಳೆಯ ಹನಿಗಳು ಧರೆಗಿಳಿಯಿತು. ಬಿಸಿಲಿನ ಸೆಕೆಯಿ೦ದ ತ೦ಪಿನ ವಾತಾವರಣನಿರ್ಮಾಣವಾಯಿತು.ಅದ್ರೆ ಮಳೆ ಬರಲೇ ಇಲ್ಲ.ಕಲಶಾಭಿಷೇಕದ ಸ೦ಧರ್ಭದಲ್ಲಿ ಭಕ್ತರ ಪ್ರವೇಶವನ್ನು ನಿಲ್ಲಿಸಲಾಗಿತ್ತು.

ಸುವರ್ಣಗೋಪುರಮ್ ಸಮಾರ್ಪಣೋತ್ಸವದ ಅ೦ಗವಾಗಿ ಗುರುವಾರದ೦ದು ಕರಾವಳಿ ಪ್ರಾ೦ತದ ಕುಣಿತ ಭಜನಾ ವೃ೦ದ ಉಡುಪಿ ಇವರ ಆಶ್ರಯದಲ್ಲಿ ಸ೦ಕೀರ್ತನ ನರ್ತನ ಸೇವೆಯನ್ನು ರಥಬೀದಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಹರ್ಷೇ೦ದ್ರ ಹೆಗ್ಗಡೆಯವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಮಠದ ಸರ್ವಜನಿಕಾ ಸ೦ಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್ ಹಾಗೂ ಮಠದ ಹಣಕಾಸು ವ್ಯವಸ್ಥಾಪಕರಾದ ವೆ೦ಕಟರಮಣ ಆಚಾರ್ಯರವರು ಹರ್ಷೇ೦ದ್ರ ಹೆಗ್ಗಡೆಯವರಿಗೆ ಶಾಲು ಹಾಕಿ ಪ್ರಸಾದವನ್ನು ನೀಡಿ ಗೌರವಿಸಿದರು.

No Comments

Leave A Comment