Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಮಾಲಿನ್ಯಕ್ಕೆ ಲಕ್ಷ ಮಕ್ಕಳು ಬಲಿ

ಹೊಸದಿಲ್ಲಿ: ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಪ್ರತಿ ವರ್ಷ ಒಂದು ಲಕ್ಷ ಮಕ್ಕಳು ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವೊಂದನ್ನು ಅಧ್ಯಯನ ವರದಿಯೊಂದು ಹೊರಹಾಕಿದೆ. ‘ಸೆಂಟರ್‌ ಫಾರ್‌ ಸೈನ್ಸ್‌ ಆ್ಯಂಡ್‌ ಎನ್ವಿರಾನ್‌ಮೆಂಟ್’ (ಸಿಎಸ್‌ಇ) ಎಂಬ ಸಂಸ್ಥೆ ನಡೆಸಿರುವ ‘ಸ್ಟೇಟ್ ಆಫ್ ಇಂಡಿಯಾಸ್‌ ಎನ್ವಿರಾನ್‌ಮೆಂಟ್’ (ಎಸ್‌ಒಎನ್‌) ಎಂಬ ಅಧ್ಯಯನ ವರದಿಯು ವಿಶ್ವ ಪರಿಸರ ದಿನಾಚರಣೆಯ ದಿನ ಬಿಡುಗಡೆಯಾಗಿದ್ದು, ಅದರಲ್ಲಿ ಈ ವಿಷಯವನ್ನು ಉಲ್ಲೇಖೀಸಲಾಗಿದೆ.

ದೇಶದೆಲ್ಲೆಡೆ ವಾರ್ಷಿಕ ಶೇ. 12.5ರಷ್ಟು ಜನರು ಮಾಲಿನ್ಯದಿಂದಲೇ ಸಾವನ್ನಪ್ಪುತ್ತಾರೆ. ಭಾರತದಲ್ಲಿ ಐದು ವರ್ಷದೊಳಗಿನ ಪ್ರತಿ 10,000 ಮಕ್ಕಳಲ್ಲಿ ಸರಾಸರಿ 8.5ರಷ್ಟು ಮಕ್ಕಳು ಮಾಲಿನ್ಯದಿಂದ ಸಾವನ್ನಪ್ಪುತ್ತಿವೆ. ಗಂಡು ಅಥವಾ ಹೆಣ್ಣು ಮಕ್ಕಳ ಮರಣ ಸಂಖ್ಯೆಯನ್ನು ಪ್ರತ್ಯೇಕಿಸಿ ನೋಡುವುದಾದರೆ, ಹೆಚ್ಚಿನ ಸಾವು ಹೆಣ್ಣು ಮಕ್ಕಳಲ್ಲೇ ಆಗುತ್ತಿದೆ. ಐದು ವರ್ಷದೊಳಗಿನ ಪ್ರತಿ 10,000 ಮಕ್ಕಳಲ್ಲಿ ಸರಾಸರಿ 9.6ರಷ್ಟು ಮಕ್ಕಳು ಸಾವಿಗೀಡಾಗುತ್ತಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

2017ರಲ್ಲೇ ದಿಲ್ಲಿ ವಾಯು ಮಾಲಿನ್ಯದ ಗಂಭೀರತೆಯ ಬಗ್ಗೆ ವರದಿ ಸಲ್ಲಿಸಿದ್ದ ಜಾಗತಿಕ ಸಂಸ್ಥೆಯೊಂದು, ಭಾರತದಲ್ಲಿ ಮಾಲಿನ್ಯದಿಂದ ವಾರ್ಷಿಕ 12 ಲಕ್ಷ ಜನರು ಸಾವಿಗೀಡಾಗುತ್ತಾರೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

No Comments

Leave A Comment