Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಯಕ್ಷಗಾನ ಕಲಾರಂಗ 16ನೇ ಮನೆ ಹಸ್ತಾಂತರ

ಉಡುಪಿ : ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೆÇೀಷಕ್ ವಿದ್ಯಾರ್ಥಿನಿ ಪವಿತ್ರಾಳಿಗೆ ಪೆರ್ಡೂರಿನಲ್ಲಿ ಪಂಚಮಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆಯನ್ನು ಜೂನ್ 5 ರಂದು ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಯಕ್ಷಗಾನ ಕಲೆ ಹಾಗೂ ಕಲಾವಿದರ ಕ್ಷೇಮ ಚಿಂತನೆಯ ಜತೆಗೆ ಬಡ ವಿದ್ಯಾರ್ಥಿಗಳ ಬದುಕಿಗೆ ನೆಮ್ಮದಿ ನೀಡುವ ಸಮಾಜಮುಖಿ ಚಿಂತನೆ ಮೂಲಕ ಯಕ್ಷಗಾನ ಕಲಾರಂಗ ಆದರ್ಶ ಸಂಸ್ಥೆಯಾಗಿ ಬೆಳೆದು ನಿಂತಿದೆ. ಗ್ರಾಮೀಣ್ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಪ್ರೌಢ ಶಿಕ್ಷಣ ಪಡೆದ ಪ್ರತಿಭಾನ್ವಿತರ ಬಾಳಿಗೆ ಬೆಳಕಾಗಿರುವ ಯಕ್ಷಗಾನ ಕಲಾರಂಗದ ಸ್ತುತ್ಯರ್ಹವಾದುದು ಎಂದು ಆಶೀರ್ವದಿಸಿದರು.
ಗಾಂಧಿ ಆಸ್ಪತ್ರೆಯನ್ನು 25 ವರ್ಷಗಳ ಹಿಂದೆ ಉದ್ಘಾಟಿಸಿದ ಪುತ್ತಿಗೆ ಶ್ರೀಗಳಿಂದಲೇ ಈ ಮನೆ ಉದ್ಘಾಟನೆಗೊಂಡಿರುವುದು ನಮ್ಮ ಸುಯೋಗ. ಬೆಳ್ಳಿ ಹಬ್ಬದ ಈ ವರ್ಷದಲ್ಲಿ ಪ್ರತಿ ತಿಂಗಳ 5ನೇ ತಾರೀಕಿನಂದು ಸಮಾಜಮುಖಿ ಕೆಲಸ ಮಾಡುವುದು ನನ್ನ ಯೋಚನೆ ಇಂದು ಸಾರ್ಥಖ್ಯ ಪಡೆಯಿತು ಎಂದು ಪಂಚಮಿ ಟ್ರಸ್ಟ್‍ನ ವರಿಷ್ಠರಾದ ಡಾ. ಹರಿಶ್ಚಂದ್ರರವರನ್ನು ಸಂತೃಪ್ತಿಯ ಮಾತುಗಳನ್ನಾಡಿದರು. ಇದೇ ಸಂದರ್ಭದಲ್ಲಿ ಡಾ. ಹರೀಶ್ಚಂದ್ರ ದಂಪತಿಗಳನ್ನು ಸಮ್ಮಾನಿಸಲಾಯಿತು.

ತಂದೆಯನ್ನು ಬಾಲ್ಯದಲ್ಲೆ ಕಳೆದುಕೊಂಡ ಫಲಾನುಭವಿ ವಿದ್ಯಾರ್ಥಿನಿ ದ್ವಿತೀಯ ಪದವಿ ಕಲಿಯುತ್ತಿರುವ ಪವಿತ್ರ ಹಾಗೂ ದ್ವಿತೀಯ ಪಿ.ಯು ವಿದ್ಯಾರ್ಥಿನಿ ಪಲ್ಲವಿ ಮನೆ ನಿರ್ಮಿಸಿಕೊಟ್ಟು ನಮ್ಮ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಟ್ಟ ವಿದ್ಯಾಪೆÇೀಷಕ್ ಸಂಸ್ಥೆಗೆ ನಾವು ಸದಾ ಋಣಿಗಳಾಗಿದ್ದೇವೆ ಎಂದು ಧನ್ಯತೆಯ ನುಡಿಗಳನ್ನಾಡಿದರು.

ಪರಿಸರ ದಿನಾಚರಣೆಯ ನೆನಪಿನಲ್ಲಿ ಮನೆಮಂದಿಗೆ ಗಿಡ ಹಾಗೂ ಪುಸ್ತಕ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದ ಕಾರ್ಯಕ್ರಮವನ್ನು ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಈವರೆಗೆ 16 ಮನೆಗಳನ್ನು ಸಂಸ್ಥೆ ನಿರ್ಮಿಸಿಕೊಡಲಾಗಿದೆ. ಈ ವರ್ಷ ಇದು ನಾಲ್ಕನೇ ಮನೆಯಾಗಿದೆ. ಈ ಸಂದರ್ಭದಲ್ಲಿ ದಾನಿ ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷರಾದ ಎಂ. ಗಂಗಾಧರ ರಾವ್ ಹಾಗೂ ಪಿ. ಕಿಶನ್ ಹೆಗ್ಡೆ ಸದಸ್ಯರಾದ ವಿ.ಜಿ ಶೆಟ್ಟಿ, ವಿಜಯ ಕುಮಾರ್ ಮುದ್ರಾಡಿ, ಗಣರಾಜ ಭಟ್, ಭುವನಪ್ರಸಾದ್ ಹೆಗ್ಡೆ, ಪಿ. ದಿನೇಶ್ ಪೂಜಾರಿ, ಕೃಷ್ಣಮೂರ್ತಿ ಭಟ್, ಪ್ರಸಾದ್ ರಾವ್, ಮೋಹನ ಪೆರ್ಡೂರು, ಅನಂತರಾಜ್ ಉಪಾಧ್ಯ, ಎಚ್.ಎನ್ ಶೃಂಗೇಶ್ವರ್, ಅಶೋಕ್ ಎಂ, ನಟರಾಜ ಉಪಾಧ್ಯ, ಮಂಜುನಾಥ, ಎಚ್. ಎನ್ ವೆಂಕಟೇಶ್, ನಾಗರಾಜ ಹೆಗಡೆ, ಉಮೇಶ್ ಪೂಜಾರಿ, ಕಿಶೋರ್ ಸಿ. ಉದ್ಯಾವರ, ಕೆ. ಗೋಪಾಲ್, ಸುದರ್ಶನ ಬಾಯರಿ ಉಪಸ್ಥಿತರಿದ್ದರು.

No Comments

Leave A Comment