Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ನೀಟ್ ಫಲಿತಾಂಶ ಪ್ರಕಟ; ನಳಿನ್ ದೇಶಕ್ಕೆ ಪ್ರಥಮ, ಕರ್ನಾಟಕದ ಫಣೀಂದ್ರ ಟಾಪರ್

ನವದೆಹಲಿ:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ ಟಿಎ) ಬುಧವಾರ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯ 2019ನೇ ಸಾಲಿನ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ರಾಜಸ್ಥಾನ ಮೂಲದ ನಳಿನ್ ಖಾಂಡೇವಾಲ್ ದೇಶಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಟಾಪರ್ ಆಗಿದ್ದಾರೆ.

ನಳಿನ್ 701 ಅಂಕ ಪಡೆದು 99.9999291 ಪರ್ಸೆಂಟೇಜ್ ಸ್ಕೋರ್ ಪಡೆದಿದ್ದಾರೆ, ತೆಲಂಗಾಣದ ಮಾಧುರಿ ರೆಡ್ಡಿ 695 ಅಂಕ ಪಡೆದು 7 ರಾಂಕ್ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ. 2019ನೇ ಸಾಲಿನಲ್ಲಿ ಒಟ್ಟು 14,10,755 ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 7, 97,042 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಂದು ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದರು. ಒಟ್ಟು 14.10 ಲಕ್ಷ ಅಭ್ಯರ್ಥಿಗಳಲ್ಲಿ, 7.97 ಲಕ್ಷ ಅಭ್ಯರ್ಥಿಗಳು ಮೆಡಿಕಲ್ –ಡೆಂಟಲ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮೇ 5ರಂದು ನೀಟ್ ಪರೀಕ್ಷೆ ನಡೆದಿತ್ತು. ಆದರೆ ಫೋನಿ ಚಂಡಮಾರುತ ಸಂತ್ರಸ್ತ ಒಡಿಶಾ ಅಭ್ಯರ್ಥಿಗಳು ಮತ್ತು ರೈಲು ವಿಳಂಬವಾದ ಕಾರಣಕ್ಕೆ ಪರೀಕ್ಷೆ ತಪ್ಪಿಸಿಕೊಂಡಿದ್ದ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೇ 20ರಂದು ಪರೀಕ್ಷೆ ನಡೆಸಲಾಗಿತ್ತು.

ದೆಹಲಿಯ ಭಾವಿಕ್ ಬನ್ಸಾಲ್ ದ್ವಿತೀಯ, ಉತ್ತರ ಪ್ರದೇಶದ ಅಕ್ಷತ್ ಕೌಶಿಕ್ ತೃತೀಯ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಫಣೀಂದ್ರ ಡಿಆರ್ 36ನೇ ರಾಂಕ್9686 ಅಂಕ) ಪಡೆದಿದ್ದಾರೆ. ಕರ್ನಾಟಕದ ಎಂ.ಮಹೇಶ್ ಆನಂದ್ 43ನೇ(685 ಅಂಕ) ರಾಂಕ್, ಪ್ರಾಗ್ಯ ಮಿತ್ರ (680 ಅಂಕ) 99ನೇ ರಾಂಕ್ ಪಡೆದಿದ್ದಾರೆ.

No Comments

Leave A Comment