Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಗ್ಯಾಂಗ್‌ ರೇಪ್‌ ಮಾಡಿ ವಿಡಿಯೋ ಹರಿಯ ಬಿಟ್ಟಿದ್ದ ನಾಲ್ವರು ಕಾಮುಕರು ಅರೆಸ್ಟ್‌

ಪಾಲಿ: ರಾಜಸ್ಥಾನದಲ್ಲಿ ಮೇ 26 ರಂದು 30 ರ ಹರೆಯದ ವಿವಾಹಿತೆಯ ಮೇಲೆ ಗ್ಯಾಂಗ್‌ ರೇಪ್‌ ಎಸಗಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟು ಅಟ್ಟಹಾಸ ಮೆರೆದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐವರು ಆರೋಪಿಗಳ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರು ಜೀತೆಂದ್ರ ಭಟ್‌(20), ಗೋವಿಂದ್‌ ಭಟ್‌ (20), ದಿನೇಶ್‌ ಭಟ್‌ (24)ಮಹೇಂದ್ರ ಭಟ್‌ (22) ಅವರನ್ನು ಬಂಧಿಸಲಾಗಿದೆ.

ಇನ್ನೋರ್ವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ.

ಸ್ನೇಹಿತೆಯೊಂದಿಗೆ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ಕಾಮುಕರು ಅಡ್ಡಗಟ್ಟಿ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿ ಹರಿಯ ಬಿಟ್ಟಿದ್ದರು.

No Comments

Leave A Comment