Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ವ್ಯಾನಿಗೆ ಟ್ರಕ್‌ ಢಿಕ್ಕಿ : ಮಹಿಳೆ, ನಾಲ್ವರು ಮಕ್ಕಳು ಸೇರಿ 13 ಮಂದಿಯ ದಾರುಣ ಸಾವು

ಕರಾಚಿ : ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ನಿನ್ನೆ ಭಾನುವಾರ ತಡ ರಾತ್ರಿ ಸಂಭವಿಸಿದ ವ್ಯಾನ್‌-ಟ್ರಕ್‌ ಢಿಕ್ಕಿಯಲ್ಲಿ ಓರ್ವ ಮಹಿಳೆ ಮತ್ತು ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ.

ವ್ಯಾನು ಕ್ವೆಟ್ಟಾದಿಂದ ಝೋಹಬ್‌ ಕಡೆಗೆ ಹೋಗುತ್ತಿತ್ತು. ಅಲಿ ಖೇಲ್‌ ಪ್ರದೇಶದಲ್ಲಿ ವ್ಯಾನಿಗೆ ಟ್ರಕ್‌ ಹೊಡೆಯಿತು. ಪರಿಣಾಮವಾಗಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟ ಇತರ ಅನೇಕರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದೊಡನೆಯೇ ರಕ್ಷಣಾ ತಂಡದವರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಇಡಿಯ ಪ್ರದೇಶವನ್ನು ಸುತ್ತುವರಿದಿದ್ದು ಘಟನೆಯ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಾಕಿಸ್ಥಾನದಲ್ಲಿ ಅತ್ಯಂತ ಕೆಟ್ಟ ಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ಘನ ವಾಹನಗಳ ಚಾಲಕರುನಿರ್ಲಕ್ಷ್ಯದ ಚಾಲನೆ ಮಾಡಿ ಅಪಘಾತ ಎಸಗುವುದು ಸಾಮಾನ್ಯವಾಗಿದೆ.

No Comments

Leave A Comment