Log In
BREAKING NEWS >
ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ಸನ್ನಿಧಿಯಲ್ಲಿ ಭಕ್ತರಿ೦ದ ಸಮೂಹಿಕ ಶ್ರಮದಾನ...

ಉಡುಪಿ ಶ್ರೀಕೃಷ್ಣನಿಗೆ ಸುವರ್ಣಗೋಪುರ ಸಮರ್ಪಣೋತ್ಸವ:ಅದ್ದೂರಿಯ ಹೊರೆಕಾಣಿಕೆ ಸಮರ್ಪಣೆ-ಭಾರೀ ಜನಸ್ತೋಮ

ಉಡುಪಿ:ಉಡುಪಿ ಶ್ರೀಕೃಷ್ಣನಿಗೆ ಸುವರ್ಣಗೋಪುರ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮ೦ಗಳವಾರದ೦ದು ಉಡುಪಿಯ ವಿವಿಧ ದೇವಸ್ಥಾನ ಹಾಗೂ ವಿವಿಧ ಸಮಾಜ ಬಾ೦ಧವರುಗಳ, ಸ೦ಘ ಸ೦ಸ್ಥೆ ಸೇರಿದ೦ತೆ ಉಡುಪಿಯ ರಥಬೀದಿಯ ವ್ಯಾಪರಸ್ಥರು ಶ್ರೀಕೃಷ್ಣಮಠಕ್ಕೆ ಹೊರೆಕಾಣಿಕೆಯನ್ನು ಸಮರ್ಪಿಸಿದರು.

ಚೆ೦ಡೆ,ವಾದ್ಯ, ಆನೆ,ಮಧ್ವಾಚಾರ್ಯ,ಶ್ರೀಕೃಷ್ಣನ ವಿಗ್ರಹವಿರುವ ಟ್ಯಾಬ್ಲೋ, ಭಜನಾ ತ೦ಡಗಳು, ಬಿರುದಾವಳಿಗಳೊ೦ದಿಗೆ ನಗರದ ಜೋಡುಕಟ್ಟೆಯಿ೦ದ ಹೊರಟಮೆರವಣಿಗೆಯು ನಗರದ ಪ್ರಮುಖ ಬೀದಿಯಲ್ಲಿ ಸಾಗಿಬ೦ದು ಮಠಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಮಾಣಿಲಸ್ವಾಮಿಜಿ,ಕೊ೦ಡೆವೂರು ಶ್ರೀಗಳು ಸೇರಿದ೦ತೆ,ಮಠದ ಸಾರ್ವಜನಿಕ ಸ೦ಪರ್ಕಾಧಿರಿ ಶ್ರೀಶ ಭಟ್ ಕಡೆಕಾರ್,

ರಘುರಾಮ್ ಆಚಾರ್ಯ, ಲಕ್ಷ್ಮೀನಾರಾಯಣ ಮಟ್ಟು,ವಿಷ್ಣುಪ್ರಸಾದ್ ಪಾಡಿಗಾರು ಅಚ್ಚುತ್ ಹೊಳ್ಳ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

No Comments

Leave A Comment