Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

13 ಮಂದಿ ಪ್ರಯಾಣಿಕರಿದ್ದ ಐಎಎಫ್ ವಿಮಾನ ನಾಪತ್ತೆ

ಇಟಾನಗರ/ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ್ದ ರಷ್ಯಾ ನಿರ್ಮಿತ ‘ಸಿ-130 ಜೆ’ ಮಾದರಿಯ ವಿಮಾನವೊಂದು ಸೋಮವಾರ ಪ್ರಯಾಣದ ಮಧ್ಯೆಯೇ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಸಿಬ್ಬಂದಿ ಹಾಗೂ 5 ಪ್ರಯಾಣಿಕರ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಸೋಮವಾರ ರಾತ್ರಿಯ ವೇಳೆಗೆ ಬಂದ ವರದಿಗಳ ಪ್ರಕಾರ, ಕಣ್ಮರೆಯಾದ ವಿಮಾನಕ್ಕಾಗಿ ಹುಡುಕಾಟ ಮುಂದುವರಿದಿದ್ದು, ಭಾರತದ ಭೂ ಸೇನೆಯ ನೆರವನ್ನೂ ಪಡೆಯಲಾಗಿದೆ. ಈ ಹುಡುಕಾಟಕ್ಕಾಗಿ ವಾಯುಪಡೆ, ತನ್ನಲ್ಲಿದ್ದ ‘ಎಎನ್‌-32’, ‘ಎಂಐ-17’ ಹಾಗೂ ‘ಆ್ಯಂಟೋವ್‌ ಎಎನ್‌-32’ ವಿಮಾನಗಳನ್ನು ನಿಯೋಜಿಸಿದೆ.

ಸೋಮವಾರ ಮಧ್ಯಾಹ್ನ 12:27ರ ಸುಮಾರಿಗೆ ಅಸ್ಸಾಂನ ಜೋರ್ಹತ್‌ ಸೇನಾ ನೆಲೆಯಿಂದ ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯಲ್ಲಿನ ಮೆಂಚುಕಾ ನಿಲ್ದಾಣದ ಕಡೆಗೆ ವಿಮಾನ ಪ್ರಯಾಣ ಬೆಳೆಸಿತ್ತು. ಟೇಕ್‌ ಆಫ್ ಆದ 35 ನಿಮಿಷಗಳಲ್ಲಿ ಅಂದರೆ 1 ಗಂಟೆಗೆ ವಿಮಾನವು ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದು ಕೊಂಡಿತು. ವಿಮಾನ ಪತನಗೊಂಡಿರುವ ಬಗ್ಗೆ ಅನುಮಾನಗಳು ಎದ್ದಿದ್ದ ರಿಂದ ಅದು ಪ್ರಯಾಣಿಸಿದ್ದ ಮಾರ್ಗದಲ್ಲಿ ಶೋಧ ನಡೆದಿದೆ.

ಐಎಎಫ್ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ.

-ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

No Comments

Leave A Comment