Log In
BREAKING NEWS >
ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ.....ಕೋವಿಡ್-19: ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಏಪ್ರಿಲ್ 14ರವರೆಗೆ ನಿಷೇಧ...

ಶ್ರೀಕೃಷ್ಣನಿಗೆ ಸುವರ್ಣಗೋಪುರ ಸಮರ್ಪಣೋತ್ಸವ:ರಥಬೀದಿಯಲ್ಲಿ ವೈಭವದ ಭಾರತೀಯ ಗೋತಳಿಗಳ ಮಿಲನ ಕಾರ್ಯಕ್ರಮ

ಉಡುಪಿ: ಸುವರ್ಣಗೋಪುರ ಸಮರ್ಪಣೋತ್ಸವದ ಅ೦ಗವಾಗಿ ಭಾನುವಾರದ೦ದು ಉಡುಪಿಯ ರಥಬೀದಿಯಲ್ಲಿ ಭಾರತೀಯ ಗೋತಳಿಗಳ ಮಿಲನ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.

ವಿವಿಧ ರೀತಿಯ ಗೋವುಗಳ ಜೊತೆಗೆ ಆ ಗೋತಳಿಗಳ ಬಗ್ಗೆ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ಗೋವುಗಳಿಗೆ ಯಾವುದೇ ರೀತಿಯ ತೊ೦ದರೆಯಾಗ ಬಾರದೆ೦ಬ ದೃಷ್ಠಿಯಿ೦ದ ನೀರನ್ನು ಸ೦ಗ್ರಹಿಸಲು ಅಲ್ಲಲ್ಲಿ ಪ್ಲಾಸ್ಟಿಕ್ ಟ್ಯಾ೦ಕ್ ಗಳನ್ನು ಇಡಲಾಗಿತ್ತು. ಮಾತ್ರವಲ್ಲದೆ ಬಿಸಿಲಿನಿ೦ದ ಹಸುಗಳಿಗೆ ರಕ್ಷಿಸುವುದಕ್ಕಾಗಿ ಚಪ್ಪರವನ್ನು ನಿರ್ಮಿಸಲಾಗಿತ್ತು.ಜೊತೆಗೆ ಕಾಲೇಜು ವಿದ್ಯಾರ್ಥಿಗಳ ಗೋವುಗಳಿಗೆ ಬೇಕಾಗುವ ನೀರನ್ನು ನೀಡುವ ವ್ಯವಸ್ಥೆಯಲ್ಲಿ ಭಾಗಿಯಾಗಿದ್ದರು.

ಬೆಳಿಗ್ಗೆ 9.30ಕ್ಕೆ ಪೇಜಾವರ ಮಠದ ಮು೦ಭಾಗದಲ್ಲಿ ಹಾಕಲಾದ ವೇದಿಕೆಯಲ್ಲಿ ಕಾರ್ಯಕ್ರಮವದ ಅಧ್ಯಕ್ಷತೆಯನ್ನು ವಹಿಸಿದ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಗೋತಳಿಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ಶ್ರೀಪಾದರು,ಅದಮಾರು ಕಿರಿಯ ಹಾಗೂ ಪಲಿಮಾರು ಕಿರಿಯ ಶ್ರೀಗಳು ಉಪಸ್ಥಿತರಿದ್ದರು.

ಸಾವಿರಾರು ಮ೦ದಿ ಭಕ್ತರು,ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

No Comments

Leave A Comment