Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಕಾಶ್ಮೀರ: ಉಗ್ರ ಸಂಘಟನೆ ತೊರೆದು ಮುಖ್ಯವಾಹಿನಿಗೆ ಮರಳಿದ ಐವರು ಯುವಕರು

ಶ್ರೀನಗರ: ಹಿಂಸಾಚಾರದ ಹಾದಿ ತುಳಿದು ವಿವಿಧ ಉಗ್ರ ಸಂಘಟನೆಗಳಿಗೆ ಸೇರಿದ್ದ ಐವರು ಯುವಕರು, ಪೊಲೀಸರು ಮತ್ತು ಕುಟುಂಬದ ಸದಸ್ಯರ ಪ್ರಯತ್ನದಿಂದಾಗಿ ಉಗ್ರ ಹಾದಿಯನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು  ಪೊಲೀಸ್ ವಕ್ತಾರರೊಬ್ಬರು  ಇಂದು  ತಿಳಿಸಿದ್ದಾರೆ.

ಆದಾಗ್ಯೂ, ಅವರ ಹೆಸರನ್ನು ಮತ್ತು ಇತರ ವಿವರಗಳನ್ನು ಭದ್ರತೆಯ ಕಾರಣಗಳಿಗಾಗಿ ಅವರು ಬಹಿರಂಗಪಡಿಸಿಲ್ಲ.ವಿವಿಧ ಉಗ್ರ ಸಂಘಟನೆ ಸೇರಿದ್ದ ಐವರು ಯುವಕರು ಹಿಂಸೆಯ ದಾರಿ ತೊರೆದು ಅಂತಿಮವಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ.

ಇದು ಅವರ ಕುಟುಂಬದ ಸದಸ್ಯರು ಮತ್ತು ಕುಲ್ಗಾಮ್ ಪೊಲೀಸರು ಪ್ರಯತ್ನದ ಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.ನಿಮ್ಮ ಮುಂದಿನ ಜೀವನ ಶಾಂತಿಯುತ ಹಾಗೂ ಉಜ್ವಲವಾಗಲಿ ಎಂದು ಅವರಿಗೆ ಪೊಲೀಸರು ಶುಭ ಹಾರೈಸಿದ್ದಾರೆ.

No Comments

Leave A Comment