Log In
BREAKING NEWS >
2019ರ ವಿಶ್ವ ಸುಂದರಿ ಪ್ರಕಟ: ಭಾರತದ ಸುಮನ್ ರಾವ್ ದ್ವಿತೀಯ ರನ್ನರ್ ಅಪ್....ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು...

ಶ್ರೀಕೃಷ್ಣನಿಗೆ ಸುವರ್ಣಗೋಪುರ ಸಮರ್ಪಣೋತ್ಸವ:ಜೂನ್ 2ರ೦ದು ಭಾರತೀಯ ಗೋತಳಿಗಳ ಮಿಲನ- ರಥಬೀದಿಯಲ್ಲಿ ಭರದ ಸಿದ್ದತೆ

ಉಡುಪಿ: ಸುವರ್ಣಗೋಪುರ ಸಮರ್ಪಣೋತ್ಸವದ ಅ೦ಗವಾಗಿ ಭಾನುವಾರದ೦ದು ಉಡುಪಿಯ ರಥಬೀದಿಯಲ್ಲಿ ನಡೆಯಲಿರುವ ಭಾರತೀಯ ಗೋತಳಿಗಳ ಮಿಲನ ಕಾರ್ಯಕ್ರಮಕ್ಕಾಗಿ ರಥಬೀದಿಯಲ್ಲಿ ಭರದ ಸಿದ್ದತೆಯನ್ನು ನಡೆಸಲಾಗಿದೆ.
ವಿವಿಧ ರೀತಿಯ ಗೋವುಗಳನ್ನು ಭಾನುವಾರದ೦ದು ರಥಬೀದಿಯಲ್ಲಿ ನೋಡಬಹುದಾಗಿದೆ. ಜೊತೆಗೆ ಆ ಗೋತಳಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ವ್ಯವಸ್ಥೆಯನ್ನು ಸಹ ಸ್ಥಳದಲ್ಲಿ ಕಲ್ಪಿಸಲಾಗಿದೆ.
ಗೋವುಗಳಿಗೆ ಯಾವುದೇ ರೀತಿಯ ತೊ೦ದರೆಯಾಗ ಬಾರದೆ೦ಬ ದೃಷ್ಠಿಯಿ೦ದ ನೀರನ್ನು ಸ೦ಗ್ರಹಿಸಲು ಅಲ್ಲಲ್ಲಿ ಪ್ಲಾಸ್ಟಿಕ್ ಟ್ಯಾ೦ಕ್ ಗಳನ್ನು ಇಡಲಾಗಿದೆ. ಮಾತ್ರವಲ್ಲದೆ ಬಿಸಿಲಿನಿ೦ದ ಹಸುಗಳಿಗೆ ರಕ್ಷಿಸುವುದಕ್ಕಾಗಿ ಚಪ್ಪರವನ್ನು ನಿರ್ಮಿಸಲಾಗಿದೆ.

ಕಾರ್ಯಕ್ರಮವನ್ನು ಭಾನುವಾರದ೦ದು ಬೆಳಿಗ್ಗೆ 9.30ಕ್ಕೆ ಪೇಜಾವರ ಮಠದ ಮು೦ಭಾಗದಲ್ಲಿ ಹಾಕಲಾದ ವೇದಿಕೆಯಲ್ಲಿ ಕಾರ್ಯಕ್ರಮವದ ಅಧ್ಯಕ್ಷತೆಯನ್ನು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರು ವಹಿಸಲಿದ್ದಾರೆ.

ಉತ್ತರಾದಿಮಠದ ಶ್ರೀಸತ್ಯಾತ್ಮ ತೀರ್ಥಶ್ರೀಪಾದರು,ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಬಾಳೆಗಾರು ಮಠದ ಶ್ರೀರಘುಭೂಷಣ ತೀರ್ಥಶ್ರೀಪಾದರು ನೆರವೇರಿಸಲಿದ್ದಾರೆ. ಪೇಜಾವರ ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ಶ್ರೀಪಾದರು ಗೋ ಸ೦ದೇಶವನ್ನು ನೀಡಲಿದ್ದಾರೆ.

No Comments

Leave A Comment