Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಸರ್ಕಾರ ರಚಿಸಲು ನೆತನ್‍ಯಹು ವಿಫಲ: ಮತ್ತೊಮ್ಮ ಚುನಾವಣೆಯತ್ತ ಇಸ್ರೇಲ್

ಜೆರುಸಲೆಂ: ಗಡುವು ಮುಗಿದರೂ ಹೊಸ ಸರ್ಕಾರ ರಚಿಸಲು ಪ್ರಧಾನಿ ಬೆಂಜಮಿನ್‍ ನೆತನ್‍ಯಹು ವಿಫಲವಾದ ಹಿನ್ನೆಲೆಯಲ್ಲಿ ಇಸ್ರೇಲ್‍ನಲ್ಲಿ ಹೊಸದಾಗಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.

ಕಳೆದ ತಿಂಗಳಷ್ಟೇ ನೆತನ್‍ ಯಾಹು ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಸಂಸತ್‍ ಸರ್ಕಾರ ವಿಸರ್ಜನೆ ಪರ ಮತ ಹಾಕಿದೆ. ಇದರೊಂದಿಗೆ ಇಸ್ರೇಲ್‍ನಲ್ಲಿ ಕೇವಲ ಒಂದು ವರ್ಷದಲ್ಲಿ ಎರಡನೇ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಸಂಸತ್‍ನಲ್ಲಿ 12 ತಾಸು ನಡೆದ ಚರ್ಚೆಯಲ್ಲಿ 74 ಸಂಸದರು ಸರ್ಕಾರ ವಿಸರ್ಜನೆ ಪರ ಮತ ಹಾಕಿದರೆ, ಇದಕ್ಕೆ ವಿರುದ್ಧವಾಗಿ 45 ಸದಸ್ಯರು ಮತ ಹಾಕಿದ್ದಾರೆ.

ಇದರೊಂದಿಗೆ 21ನೇ ಇಸ್ರೇಲ್‍ ಸಂಸತ್‍ (ಕೆನೆಸೆಟ್‍) ವಿಸರ್ಜನೆಗೊಳ್ಳಲಿದೆ. ಹೊಸ ಚುನಾವಣೆ ಮುಂದಿನ ಸೆ.17ರಂದು ನಡೆಯಲಿದೆ ಎಂದು ಟೈಮ್ಸ್ ಆಫ್‍ ಇಸ್ರೇಲ್‍ ಪತ್ರಿಕೆ ವರದಿ ಮಾಡಿದೆ.

ಮೈತ್ರಿಕೂಟ ಸದೃಢವಾಗಿದ್ದರೆ ನೆತನ್‍ಯಾಹು ಸತತ ನಾಲ್ಕನೇ ಬಾರಿಗೆ ಪ್ರಧಾನಮಂತ್ರಿಯಾಗುತ್ತಿದ್ದರು. ಏ.9ರಂದು ನಡೆದ ಚುನಾವಣೆಯಲ್ಲಿ ಅವರ ಲಿಕುಡ್‍ ಪಕ್ಷ ಉತ್ತಮ ತೋರಿದರೂ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದಿರಲಿಲ್ಲ. ಇದರಿಂದ ಮೈತ್ರಿಪಕ್ಷಗಳ ಮೊರೆ ಹೋಗಲಾಗಿತ್ತು.

No Comments

Leave A Comment