Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಮುಂದುವರಿದ ಕಾಂಗ್ರೆಸ್‌ ಬಿಕ್ಕಟ್ಟು : ಮಣಿಪುರ MPCC ಹುದ್ದೆಗಳಿಗೆ 12 ಶಾಸಕರ ರಾಜೀನಾಮೆ

ಇಂಫಾಲ : 2019ರ ಲೋಕಸಭಾ ಚುನಾವಣೆಯಲ್ಲಿ ದಯನೀಯ ಸೋಲು ಕಂಡ ಬಳಿಕದಲ್ಲಿ ದೇಶಾದ್ಯಂತ ಕಾಂಗ್ರೆಸ್‌ ಪಕ್ಷದಲ್ಲಿನ ಬಿಕ್ಕಟ್ಟು, ತಳಮಳ ದಿನೇ ದಿನೇ ತೀವ್ರಗೊಳ್ಳುತ್ತಿದೆ.

ಮಣಿಪುರ ವಿಧಾನಸಭೆಯ 12 ಶಾಸಕರು ಮಣಿಪುರ ಪ್ರದೇಶ್‌ ಕಾಂಗ್ರೆಸ್‌ ಸಮಿತಿಯಲ್ಲಿನ ತಮ್ಮ ಹುದ್ದೆಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ತಾವು ಪಕ್ಷ ತೊರೆಯುವುದಿಲ್ಲ; ಬದಲು ಪಕ್ಷವನ್ನು ತಳಮಟ್ಟದಲ್ಲಿ ಬಲಿಷ್ಠ ಗೊಳಿಸಲು ಶ್ರಮಿಸುವುದಾಗಿ ಈ ಶಾಸಕರು ಹೇಳಿದ್ದಾರೆ.

ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಶಾಸಕರು ಇವರು : ಎನ್‌ ಲೋಕೇನ್‌, ಕೆಎಚ್‌ ಜೊಯ್‌ಕಿಶನ್‌, ಮೊಹಮ್ಮದ್‌ ಅಬ್ದುಲ್‌ ನಜೀರ್‌, ಡಿಡಿ ಥಾಯಿಸೀ, ಚಾಲ್ಟೋನ್‌ಲೀನ್‌ ಆಮೋ, ಗೋವಿಂದಾಸ್‌ ಖಂತೋಜಾಮ್‌, ಕೆ ರಂಜಿತ್‌, ಆಲ್‌ಫ್ರೆಡ್‌ ಕಂಗ್ನಾಮ್‌ ಆರ್ಥರ್‌, ಡಿಕೆ ಕೊರುಂಗ್‌ಥಾಂಗ್‌, ಆರ್‌ಕೆ ಇಮೋ ಸಿಂಗ್‌, ಕೆ ಮೇಘಚಂದ್ರ, ಫ‌ಜೂರ್‌ ರಹೀಮ್‌. ಇವರೆಲ್ಲ ಎಂಪಿಸಿಸಿ ಯಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು.

ಎಂಪಿಸಿಸಿ ಯಲ್ಲಿನ ತಮ್ಮ ಹುದ್ದೆಗಳಿಗೆ ಹಾಲಿ ಶಾಸಕರು ರಾಜೀನಾಮೆ ನೀಡಿರುವ ದಿಢೀರ್‌ ನಿರ್ಧಾರವು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿ ಪುನಶ್ಚೇತನಗೊಳಿಸುವುದೇ ಆಗಿದೆ, ಹೊರತು ಬೇರೇನೂ ಅಲ್ಲ ಎಂದು ಎಂಪಿಸಿಸಿ ಅಧ್ಯಕ್ಷ ಜಿ ಘಾಯ್‌ಖಾಂಗಮ್‌ ತಿಳಿಸಿದ್ದಾರೆ.

No Comments

Leave A Comment