Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಮತ್ತೆ ವಿದ್ಯುತ್ ದರ ಏರಿಕೆ ಶಾಕ್; ಪ್ರತಿ ಯೂನಿಟ್ ಗೆ 33 ಪೈಸೆ ಹೆಚ್ಚಳ

ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಇದೀಗ ಜನರಿಗೆ ರಾಜ್ಯ ಸರ್ಕಾರ ವಿದ್ಯುತ್ ದರದ ಶಾಕ್ ಕೊಟ್ಟಿದೆ. ನೂತನ ವಿದ್ಯುತ್ ದರ ಪರಿಷ್ಕರಣೆ ಅನ್ವಯ ಪ್ರತಿ ಯೂನಿಟ್ ಗೆ 33ಪೈಸೆಯಷ್ಟು ದರ ಏರಿಕೆ ಮಾಡಿದೆ.

2019-20ನೇ ಸಾಲಿನಲ್ಲಿ ಒಂದು ಯೂನಿಟ್ ವಿದ್ಯುತ್ ಗೆ 1.38ಪೈಸೆ ದರ ಏರಿಕೆ ಮಾಡುವಂತೆ ಕೋರಿತ್ತು. ಕೆಇಆರ್ ಸಿ ಯೂನಿಟ್ ಗೆ 33 ಪೈಸೆ ಏರಿಕೆಗೆ ಅನುಮೋದನೆ ನೀಡಿದೆ. ಚೆಸ್ಕಾಂ ಪ್ರತಿ ಯೂನಿಟ್ ಗೆ ಸರಾಸರಿ 1 ರೂಪಾಯಿ ಏರಿಕೆಗೆ ಮನವಿ ಸಲ್ಲಿಸಿದ್ದು, 33 ಪೈಸೆ ಏರಿಕೆಗೆ ಒಪ್ಪಿಗೆ ನೀಡಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 33ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಬೆಸ್ಕಾಂ ಪ್ರತಿ ಯೂನಿಟ್ ಗೆ 1.01 ರೂ. ಏರಿಕೆಗೆ ಕೆಇಆರ್ ಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಸಾಲಿನಲ್ಲಿ ಸರಾಸರಿ ಶೇ.4.8ರಷ್ಟು ದರ ಏರಿಕೆ ಮಾಡಿದಂತಾಗಿದೆ.

No Comments

Leave A Comment