Log In
BREAKING NEWS >
ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಮಗು ಮತ್ತು ಚಾಲಕ ಗ೦ಭೀರ....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಕೃಷ್ಣ ಅಜಯ್ ರಾವ್ ಗೆ ಸಂಜನಾ ಆನಂದ್ ನಾಯಕಿ

ನಟಿ ಸಂಜನಾ ಆನಂದ್ ಕನ್ನಡ ಚಿತ್ರರಂಗ ಕಾಣುತ್ತಿರುವ ನವಪ್ರತಿಭೆಗಳಲ್ಲಿ ಒಬ್ಬರು. ಇದೀಗ ಆಕೆ ತಮ್ಮ ನಾಲ್ಕನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ. “ಕೆಮಿಸ್ಟ್ರಿ ಆಫ್ ಕರಿಯಪ್ಪ” ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಸಂಜನಾ ಅಜಯ್ ರಾವ್ ಅವರ ಮುಂಬರುವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ವೇಳೆ ನಟಿ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಸಹ ಅಭಿನಯಿಸುತ್ತಿದ್ದು ಅನಿಲ್ ಮಂಡ್ಯ ನಿರ್ದೇಶನದ “ಕ್ಷತ್ರಿಯ” ಚಿತ್ರದಲ್ಲಿ ಇವರು ಸರ್ಜಾ ಕುಟುಂಬದ ಕುಡಿಯೊಂದಿಗೆ ಅಭಿನಯಿಸುತ್ತಿದ್ದಾರೆ. ಚಿತ್ರದ ಮಹೂರ್ತ ಇಂದು ನೆರವೇರಲಿದೆ.

“ನನಗೆ ಬಹಳವೇ ಸಂತಸವಾಗುತ್ತಿದೆ. ಹಾಗೆಯೇ ನನ್ನ ಜವಾಬ್ದಾರಿಗಳು ಹೆಚ್ಚಿದೆ.  ಕರಿಯಪ್ಪ ಚಿತ್ರತಂಡಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ. ಅವರಿಗೆ ನಾನು  ಕೃತಜ್ಞಳಾಗಿರಬೇಕು.ಅವರು ನನ್ನನ್ನು ಚಿತ್ರದಲ್ಲಿ ಕೇಂದ್ರ ಪಾತ್ರವನ್ನಾಗಿ ತೆರೆ ಮೇಲೆ ತಂದಿದ್ದರು.” ಸಂಜನಾ ಹೇಳಿದ್ದಾರೆ.

“ಕರುಯಪ್ಪ” ಚಿತ್ರದ ಜತೆಗೇ ನಟಿ “ಕುಷ್ಕ” ಎಂಬ ಇನ್ನೊಂದು ಚಿತ್ರದಲ್ಲಿ ಸಹ ಅಭಿನಯಿಸಿದ್ದರು. ಆ ಚಿತ್ರ ಇನ್ನು ಮೂರು ತಿಂಗಳಲ್ಲಿ ತೆರೆಗೆ ಬರಲಿದೆ.ಈ ನಡುವೆ ನಟಿ ತಾವು ವಿಕ್ರಮ್ ಯೋಗಾನಂದ್ ನಿರ್ದೇಶನದ ವೆಬ್ ಸೀರೀಸ್ “ಹನಿಮೂನ್” ನಲ್ಲಿ ಅಭಿನಯಿಸಿದ್ದು ತಮ್ಮ ಪಾಲಿನ ಶೂಟಿಂಗ್ ಮುಗಿಸಿದ್ದಾರೆ. ನಟಿ ಮುಂದಿಅನ 10 ದಿನಗಳಲ್ಲಿ ಅಜಯ್ ರಾವ್ ನಟನೆಯ ಚಿತ್ರದಲ್ಲಿ ಅಭಿನಯಿಸಲು ತಯಾರಾಗಲಿದ್ದಾರೆ. “ಕ್ಷತ್ರಿಯ” ಸೆಟ್ ಗೆ ನಟಿ ಆಗಸ್ಟ್ ನಲ್ಲಿ ಎಂಟ್ರಿ ಕೊಡುವ ನಿರೀಕ್ಷೆ ಇದೆ.

No Comments

Leave A Comment