Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ನಿರಂತರ ಐದನೇ ಬಾರಿ ಒಡಿಶಾ ಮುಖ್ಯಮಂತ್ರಿಯಾಗಿ ನವೀನ್‌ ಪಟ್ನಾಯಕ್‌ ಶಪಥ

ಭುವನೇಶ್ವರ : ಬಿಜೂ ಜನತಾ ದಳದ ಅಧ್ಯಕ್ಷ ನವೀನ್‌ ಪಟ್ನಾಯಕ್‌ ಅವರಿಂದು ಬುಧವಾರ ನಿರಂತರ ಐದನೇ ಬಾರಿ ಒಡಿಶಾ ಮುಖ್ಯಮಂತ್ರಿಯಾಗಿ ಶಪಥ ಗ್ರಹಣ ಮಾಡಿದರು.

ಇಲ್ಲಿನ  ಇಡ್‌ಕೋ ಎಗ್ಸಿಬಿಷನ್‌ ಗ್ರೌಂಡ್‌ ನಲ್ಲಿ ಏರ್ಪಡಿಸಲಾಗಿದ್ದ ಅದ್ದೂರಿಯ ಸಮಾರಂಭದಲ್ಲಿ ರಾಜ್ಯಪಾಲ ಗಣೇಶೀ ಲಾಲ್‌ ಅವರು ಪಟ್ನಾಯಕ್‌ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

147 ಸದಸ್ಯ ಬಲದ ಒಡಿಶಾ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಬಿಜೆಡಿ 112 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಮರಳಿದೆ. ಕಳೆದ 2000 ಇಸವಿಯಿಂದಲೂ ಒಡಿಶಾದಲ್ಲಿ ಬಿಜೆಡಿ ಅಧಿಕಾರದಲ್ಲಿದೆ.

ಪಟ್ನಾಯಕ್‌ ಅವರು ಸಾರ್ವಜನಿಕ ಮೈದಾನಿನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಹಿಂದೆ 2000, 2004, 2009 ಮತ್ತು 2014ರಲ್ಲಿ ಅವರು ರಾಜ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

No Comments

Leave A Comment