Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

2ನೇ ಬಾರಿ ಪ್ರಧಾನಿಯಾಗುವ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಆಶೀರ್ವಾದ ಪಡೆದ ಮೋದಿ

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾಜಿ ರಾಷ್ಟ್ರಪತಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.

ಗುರುವಾರ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಮೋದಿ ಮಾಜಿ ರಾಷ್ಟ್ರಪತಿಯನ್ನು  “ರಾಜನೀತಿಜ್ಞ” ಎಂದು ಬಣ್ಣಿಸಿದ್ದಾರೆ.

“ಪ್ರಣಬ್ ದಾ ಅವರೊಂದಿಗಿನ ಭೇಟಿ ಎಂದಿಗೂ ಸಮೃದ್ದ ಅನುಭವವನ್ನು ಒಳಗೊಂಡಿರುತ್ತದೆ. ಅವರ ಜ್ಞಾನ ಮತ್ತು ಒಳನೋಟಗಳಿಗೆ ಸಾಟಿ ಇಲ್ಲ. ಅವರು ರಾಷ್ಟ್ರವು ಎಂದಿಗೂ ಮರೆಯಲಾಗದ ಕೊಡುಗೆ ನೀಡಿದ್ದಾರೆ.” ಮೋದಿ  ಟ್ವೀಟ್ ಮಾಡಿದ್ದಾರೆ.

“ಇಂದು ನಮ್ಮ ಭೇಟಿಯಲ್ಲಿ ಅವರ ಆಶೀರ್ವಾದವನ್ನು ಬೇಡಿದ್ದೆನು” ಅವರು ಹೇಳಿದರು.

ಜನವರಿಯಲ್ಲಿ ಮೋದಿ ನೇತೃತ್ವದ ಸರ್ಕಾರದ ಶಿಫಾರಸಿನ ಮೇರೆಗೆ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪ್ರಶಸ್ತಿ ಲಭಿಸಿತ್ತು.

No Comments

Leave A Comment