Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಶ್ರೀ ಕೃಷ್ಣ ಮಠ ಗರ್ಭ ಗುಡಿಯ ಸುವರ್ಣಗೋಪುರದ ಕೆಲಸ ಪ್ರಗತಿಯಲ್ಲಿ

ಉಡುಪಿ: ಶ್ರೀ ಕೃಷ್ಣ ಮಠದದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು ಸಂಕಲ್ಪಿಸಿರುವ ಗರ್ಭ ಗುಡಿಯ ಸುವರ್ಣಗೋಪುರದ ಕೆಲಸವು ಪ್ರಗತಿಯಲ್ಲಿ ನಡೆಯುತ್ತಿದೆ. ಜೂನ್ 1ರ೦ದು 10ವರೆಗೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಸುವರ್ಣಗೋಪುರದ ಸಮರ್ಪಣಾ ಕಾರ್ಯಕ್ರಮವು ನಡೆಯಲಿದೆ.

ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಗೆ ನೂತನವಾಗಿ ನಿರ್ಮಿಸುತ್ತಿರುವ ಸ್ವರ್ಣಗೋಪುರದ ಕೆಲಸ ಸುಮಾರು ಶೇ.75 ಪೂರ್ಣಗೊಂಡಿದೆ.

ಗರ್ಭಗುಡಿಯ ಮೇಲಿನ ನಾಲ್ಕೂಕಡೆ ಛಾವಣಿಯ ಮೇಲೆ ಸ್ವರ್ಣದ ಹಾಳೆಯನ್ನು ಮಡಾಯಿಸಲಾಗಿದೆ. ಮೇಲೆ ಹೋಗಲು ಅನುಕೂಲವಾಗುವಂತೆ ದೊಂಬೆಯ ಭಾಗವನ್ನು ಮಾತ್ರ ಹಾಕದೆ ಉಳಿಸಿಕೊಳ್ಳಲಾಗಿದೆ. ಕೆಳಭಾಗ ಎರಡು ಕಡೆ ತಾಮ್ರದ ತಗಡನ್ನು ಮಡಾಯಿಸಲಾಗಿದೆ. ಒಂದೆರಡು ದಿನಗಳಲ್ಲಿ ಈ ನಾಲ್ಕೂ ಕಡೆ ಚಿನ್ನದ ಹಾಳೆಯನ್ನೂ ಹೊದೆಸಲಾಗುತ್ತದೆ.

ಕೆಳಭಾಗ ಸಾಗುವಾನಿಯ ಮರ, ಅದರ ಮೇಲೆ ತಾಮ್ರದ ತಗಡನ್ನು ಹಾಕಿ, ಅದರ ಮೇಲೆ ಚಿನ್ನದ ಹಾಳೆಯನ್ನು ಜೋಡಿಸಲಾಗುವುದು. ಒಟ್ಟು 100 ಕೆ.ಜಿ. ಚಿನ್ನ, 800 ಕೆ.ಜಿ. ಬೆಳ್ಳಿ, 250 ಕೆ.ಜಿ. ತಾಮ್ರವನ್ನು ಬಳಸಲಾಗುತ್ತಿದೆ. ಒಟ್ಟು 2,500 ಚದರಡಿಯ ಛಾವಣಿಗೆ ಸಾಗುವಾನಿ ಮರದ ಮುಚ್ಚಿಗೆ ಅದರ ಮೇಲೆ ತಾಮ್ರ, ಚಿನ್ನದ ತಗಡು ಹೊದೆಸಲಾಗಿದೆ. ಸರ್ವಮೂಲ, ಹಂಸಮಂತ್ರ, ದಾನಿಗಳ ಹೆಸರನ್ನು ತಗಡಿನಲ್ಲಿ ಬರೆಸಲಾಗಿದೆ.

ಹಿಂದಿನ ತಾಮ್ರದ ತಗಡನ್ನು ಭಕ್ತರಿಗೆ ಟಂಕೆ ರೂಪದಲ್ಲಿ ಕೊಡಲಾಗುತ್ತದೆ. ಟಂಕೆ ಮಾಡಿಸುವ ಕೆಲಸವೂ ನಡೆಯುತ್ತಿದೆ.

ಮೇ 31ರಿಂದ ಜೂ. 10ರ ವರೆಗೆಸುವರ್ಣ ಗೋಪುರ ಸಮರ್ಪಣಾ ಸಮಾರಂಭ ಆಯೋಜಿಸಲಾಗಿದೆ.

No Comments

Leave A Comment