Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ಪಾಪಿಗಳ ಕೃತ್ಯ: ಪಾಕ್ ನಲ್ಲಿದ್ದ ಐತಿಹಾಸಿಕ ನಾನಕ್ ಪ್ಯಾಲೇಸ್ ಧ್ವಂಸ

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಶತಮಾನಗಳಷ್ಟು ಹಳೆಯದಾದ  ‘ಗುರು ನಾನಕ್ ಪ್ಯಾಲೇಸ್’ ನ ಕೆಲೆ ಬಾಗಗಳನ್ನು ಧ್ವಂಸ ಮಾಡಲಾಗಿದೆ. ಕಟ್ಟಡದ ಅಪರೂಪದ ರಚನೆಗಳಿರುವ ಕಿಟಕಿ ಹಾಗೂ ಬಾಗಿಲುಗಳನ್ನು ಮುರಿದು ಹಾಕಲಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.

ನಾಲ್ಕು ಅಂತಸ್ತಿನ ಕಟ್ಟಡದ ಗೋಡೆಗಳು ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ಮತ್ತು ಹಲವಾರು ಹಿಂದು ರಾಜರು ಮತ್ತು ರಾಜಕುಮಾರರ ಚಿತ್ರಗಳನ್ನು ಹೊಂದಿದ್ದವು.  ನಾಲ್ಕು ಶತಮಾನಗಳ ಹಿಂದೆ ನಿರ್ಮಾಣವಾದ ಬಾಬಾ ಗುರುನಾನಕ್ ಪ್ಯಾಲೇಸ್ ಭಾರತ ಸೇರಿದಂತೆ ಜಗತ್ತಿನಾದ್ಯಂತದ ಸಿಖ್ಖರನ್ನು ತನ್ನತ್ತ ಸೆಳೆಯುತ್ತಿತ್ತು.

ಪ್ರಾಂತ್ಯ ರಾಜಧಾನಿ ಲಾಹೋರ್ ನಿಂದ ಸುಮಾರು 100 ಕಿಮೀ ದೂರದಲ್ಲಿರುವ ನರೋವಾಲ್ ಎಂಬ ಗ್ರಾಮದಲ್ಲಿ ಈ ಗುರುನಾನಕ್ ಪ್ಯಾಲೇಸ್ ಇದೆ. ಕಟ್ಟಡದಲ್ಲಿ ಒಟ್ಟು 16 ಕೋಣೆಗಳಿದ್ದು ಪ್ರತಿ ಕೋಣೆಯೂ ಮೂರು ಪ್ರಾಚೀನ ಬಾಗಿಲುಗಳನ್ನು ಹೊಂದಿದ್ದರೆ ವಾತಾಯನಕ್ಕೆ ಬೇಕಾದಷ್ಟು ಗಾಳಿಯಾಡುವ ದೊಡ್ಡ ಕಿಟಕಿಗಳನ್ನು ಹೊಂದಿದೆ.

ಇದೀಗ ಸ್ಥಳೀಯ ಗುಂಪು ಅಕ್ವಾಫ್ ಇಲಾಖೆಯ ಅಧಿಕಾರಿಗಳ ಸಹಯೋಗದೊಡನೆ ಈ ಕಟ್ಟಡವನ್ನು ಭಾಗಷಃ ನೆಲಸಮಗೊಳಿಸಿದ್ದಲ್ಲದೆ ಅಲ್ಲಿನ ಅಮೂಲ್ಯ ಕಲಾಕೃತಿಯುಳ್ಳ ಕಿಟಲಿ, ಬಾಗಿಲುಗಳನ್ನು ಮಾರಾಟ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಹಳೆಯ ಇಟ್ಟಿಗೆಗಳು, ಮರಳು, ಮಣ್ಣು ಹಾಗೂ  ಸುಣ್ಣದಕಲ್ಲುಗಳಿಂದ ಈ ಕಟ್ಟಡ ನಿರ್ಮಾಣವಾಗಿದೆ.ಮರದ ಬಾಗಿಲುಗಳ ಮೇಲೆ ಹೂವು, ಬಳ್ಳಿಗಳ ಅಲಂಕಾರವಿದೆ.

No Comments

Leave A Comment