Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಸರ್ಕಾರಿ ಆ್ಯಂಬುಲೆನ್ಸ್- ಕಾರು ಡಿಕ್ಕಿ: ಬೆಂಗಳೂರಿನಲ್ಲಿ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ಐವರ ಸಾವು

ಬೆಂಗಳುರು: ಸಿಲಿಕಾನ್ ಸಿಟಿಯಲ್ಲಿ ನಡುರಾತ್ರಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬೆಂಗಳೂರು ಯಲಹಂಕದ ಕೋಗಿಲು ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ದಾರುಣ ಸಾವಿಗೀಡಾಗಿದ್ದಾರೆ.

ರಾತ್ರಿ 12:30ಕ್ಕೆ ಸಂಭವಿಸಿದ ದುರ್ಘಟನೆಯಲ್ಲಿ ಸರ್ಕಾರಿ ಅಂಬುಲೆನ್ಸ್ ಹಾಗೂ ವ್ಯಾಗನ್ ಆರ್ ಕಾರ್ ಪರಸ್ಪರ ಡಿಕ್ಕಿಯಾಗಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರಲ್ಲಿ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರಿದ್ದಾರೆ.

ಇವರೆಲ್ಲಾ ಪಶ್ಚಿಮ ಬಂಗಾಳ ಮೂಲದವಾರಗಿದ್ದು ದೀಪಕ್ (46), ಸಂಜಯ್ (45), ಮತ್ತು ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.  ಘಟನೆಯಲ್ಲಿ ಒಬ್ಬ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೆನ್ನೈನಿಂದ ಆರ್ ಟಿ ನಗರದ ಸಂಬಂಧಿಕರ ಮನೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಆ್ಯಂಬುಲೆನ್ಸ್ ಚಾಲಕನ ಅತಿ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಮೃತರ ಶವಗಳನ್ನು ಯಲಹಂಕ ಆಸ್ಪತ್ರೆಗೆ ಸಾಗಿಸಲಾಗಿದೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment