Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಬೆಳಗಾವಿ: ರಸ್ತೆ ಕಾಮಗಾರಿ ವೇಳೆ ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಬೆಳಗಾವಿ: ರಸ್ತೆ ಅಭಿವೃದ್ಧಿ ಸೇತುವೆ ಕಾಮಗಾರಿ ನಡೆಸುತ್ತಿದ್ದ ವೇಳೆ ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ತಾಲೂಕಿನ ದೇಸೂರು ಬಳಿ ನಡೆದಿದೆ.

ಖಾನಾಪುರ-ಬೆಳಗಾವಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಜಾರ್ಖಂಡ್ ಮೂಲದ ಕಾರ್ಮಿಕರಾದ ದುರ್ಗೆಶ್ ಕುಮಾರ್(22ವರ್ಷ), ಅರ್ಜುನ್ ಸಿಂಗ್ (21ವರ್ಷ), ಸುಖಾನ್ ಎಂದು ಗುರುತಿಸಲಾಗಿದೆ.

ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಖಾನ್ ಎಂಬ ಕಾರ್ಮಿಕನನ್ನು ಜೆಸಿಬಿ ಮೂಲಕ ಮಣ್ಣು ಅಗೆದು ಶವವನ್ನು ಹೊರತೆಗೆಯಲಾಯಿತು ಎಂದು ವರದಿ ತಿಳಿಸಿದೆ.

No Comments

Leave A Comment