Log In
BREAKING NEWS >
ಮಹಾರಾಷ್ಟ್ರದಲ್ಲಿ ಸರಕಾರಿ ನೌಕರರಿಗೆ ಉದ್ಧವ್‌ ಬಂಪರ್‌ ಗಿಫ್ಟ್‌: ವಾರಕ್ಕೆ ಐದು ದಿನ ಮಾತ್ರ ಕೆಲಸ...

ಕೇರಳದತ್ತ 15 ಐಸಿಸ್‌ ಉಗ್ರರು ? : ಕರಾವಳಿಯಲ್ಲಿ ಕಟ್ಟೆಚ್ಚರ

ತಿರುವನಂತಪುರ: ಶ್ರೀಲಂಕಾದಿಂದ ಹೊರಟ 15 ಮಂದಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಲಕ್ಷದ್ವೀಪದ ಮೂಲಕ ಕೇರಳ ಪ್ರವೇಶಕ್ಕೆ ಮುಂದಾಗಿರುವ ಬಗ್ಗೆ ವರದಿಗಳು ಬಂದ ಹಿನ್ನಲೆಯಲ್ಲಿ ಕೇರಳದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕರಾವಳಿ ರಕ್ಷಣಾ ಪಡೆ, ಕರಾವಳಿ ಠಾಣೆಗಳ ಪೊಲೀಸ್‌ ಅಧಿಕಾರಿಗಳು ಜಾಗೃತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ರೀತಿಯಲ್ಲಿ ಎಚ್ಚರಿಕೆಗಳು ಸಾಮಾನ್ಯವಾಗಿ ಬರುತ್ತವೆ ಆದರೆ ಈ ಬಾರಿ ನಾವು ಹೆಚ್ಚು ಜಾಗೃತರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಏನಾದರೂ ಸಂಶಯಾಸ್ಪದವಾಗಿ ಕಂಡು ಬಂದಲ್ಲಿ ತಪಾಸಣೆ ನಡೆಸುತ್ತಿದ್ದೇವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 23 ರಂದು ಶ್ರೀಲಂಕಾದ ಅಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.

ಎಪ್ರಿಲ್‌ 23 ರಂದು ಶ್ರೀಲಂಕಾದಲ್ಲಿ ಭೀಕರ ದಾಳಿ ನಡೆದ ಬಳಿಕಕೇರಳದ ಕರಾವಳಿಯಲ್ಲಿ ಎಚ್ಚರವಹಿಸಲಾಗಿದೆ.

No Comments

Leave A Comment