Log In
BREAKING NEWS >
ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಮಗು ಮತ್ತು ಚಾಲಕ ಗ೦ಭೀರ....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಸ್ಮೃತಿ ಇರಾನಿ ಆಪ್ತನ ಹತ್ಯೆ: ಇಬ್ಬರು ಶಂಕಿತರು ಪೋಲೀಸ್ ವಶಕ್ಕೆ

ಅಮೇಥಿ: ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ವಿರುದ್ಧ ಜಯಭೇರಿ ಬಾರಿಸಿದ್ದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಪ್ತನ ಕೊಲೆಗೆ ಸಂಬಂಧಿಸಿ ಇಬ್ಬರು ಶಂಕಿತರನ್ನು   ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಅವರನ್ನು ಶನಿವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿರುವ ಪೋಲೀಸ್ ಇಲಾಖೆ ಹತ್ಯೆಗೆ ಸಂಬಂಧಿಸಿ ಶಂಕಿತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಸುರೇಂದ್ರ ಸಿಂಗ್ ಹತ್ಯೆಗೆ ನೈಜ ಕಾರಣವಿನ್ನೂ ಪತ್ತೆಯಾಗಿಲ್ಲ. ರಾಜಕೀಯ ವೈಷಮ್ಯ ಕೊಲೆಗೆ ಕಾರಣವೆಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸಂಸದೆ ಸ್ಮೃತಿ ಇರಾನಿ ತಾವು ಹತ್ಯೆಗೀಡಾದ ಸುರೇಂದ್ರ ಸಿಂಗ್ ಅವರ ಮನೆಗೆ ಧಾವಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

No Comments

Leave A Comment