Log In
BREAKING NEWS >
"ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರೆಯ ಶುಭಾಶಯಗಳು"-ನಾಡಿನೆಲ್ಲೆಡೆಯಲ್ಲಿ ಮಹಾಶಿವರಾತ್ರೆಯ ಸ೦ಭ್ರಮ:ಶಿವನ ದೇವಾಲಯಗಳಲ್ಲಿ ಜನಜ೦ಗುಲಿ

2020ಕ್ಕೆ ಆಮ್ ಆದ್ಮಿ ಪಾರ್ಟಿ ತೊರೆಯುತ್ತೇನೆ; ಶಾಸಕಿ ಅಲ್ಕಾ ಲಂಬಾ

ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ಮುಂದಿನ ವರ್ಷ ತೊರೆಯುವುದಾಗಿ ಅತೃಪ್ತ ಶಾಸಕಿ ಅಲ್ಕಾ ಬಾ ಘೋಷಿಸಿದ್ದಾರೆ.

2013ರಲ್ಲಿ ನಿಮ್ಮ ಜೊತೆ ನನ್ನ ಪ್ರಯಾಣ ಆರಂಭವಾಗಿತ್ತು, ಅದು 2020ರಲ್ಲಿ ಕೊನೆಯಾಗಲಿದೆ. ಪಕ್ಷದ ನಿಷ್ಠಾವಂತ ಕ್ರಾಂತಿಕಾರಿ ತಳಮಟ್ಟದ ಕಾರ್ಯಕರ್ತರಿಗೆ ನನ್ನ ಶುಭ ಹಾರೈಕೆಗಳು ಯಾವತ್ತೂ ಇರುತ್ತದೆ, ದೆಹಲಿಯ ಗಟ್ಟಿ ಬದಲಾವಣೆಗೆ ನೀವು ಯಾವತ್ತೂ ಇರುತ್ತೀರೆಂದು ಭಾವಿಸುತ್ತೇನೆ. ಕಳೆದ ಆರು ವರ್ಷಗಳು ನಿಜಕ್ಕೂ ಮರೆಯಲಾರದ ಅನುಭವವನ್ನು ಕೊಟ್ಟಿದೆ, ನಾನು ಸಾಕಷ್ಟು ನಿಮ್ಮಿಂದ ಕಲಿತಿದ್ದೇನೆ ಎಂದು ದೆಹಲಿಯ ಚಾಂದಿನಿ ಚೌಕ್ ಶಾಸಕಿಯಾಗಿರುವ ಅಲ್ಕಾ ಲಂಬಾ ಟ್ವೀಟ್ ಮಾಡಿದ್ದಾರೆ.

ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆಯಿದ್ದು ಅದಕ್ಕೆ ಮುನ್ನ ಪಕ್ಷ ತೊರೆಯಲಿದ್ದಾರೆಯೇ ಅಥವಾ ನಂತರ ತೊರೆಯಲಿದ್ದಾರೆಯೇ ಎಂಬ ಬಗ್ಗೆ ಹೇಳಲಿಲ್ಲ. ಕಳೆದ ಕೆಲ ದಿನಗಳಿಂದ ಅಲ್ಕ ಲಂಬಾ ಅಸಮಾಧಾನ ಮತ್ತು ಭಿನ್ನಮತೀಯ ನಿಲುವಿನಿಂದ ಸುದ್ದಿಯಾಗಿದ್ದರು.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಹೀನಾಯ ಸೋಲಿಗೆ ನಿಖರ ಕಾರಣವೇನೆಂದು ತಿಳಿಸಬೇಕೆಂದು ಕೇಳಿದ ನಂತರ ಪಕ್ಷದ ಶಾಸಕರ ಅಧಿಕೃತ ವಾಟ್ಸಾಪ್ ಗ್ರೂಪ್ ನಿಂದ ಅಲ್ಕಾ ಲಂಬಾ ಅವರನ್ನು ತೆಗೆದುಹಾಕಲಾಗಿತ್ತು.

No Comments

Leave A Comment