Log In
BREAKING NEWS >
ಆಗಸ್ಟ್ 18ರ ಭಾನುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸಮೂಹಿಕ ಚೂಡಿಪೂಜೆ ನಡೆಯಲಿದೆ.ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಸಿಇಟಿ ಫಲಿತಾಂಶ ಪ್ರಕಟ; ಜಫಿನ್ ಬಿಜುಗೆ ಎಂಜಿನಿಯರಿಂಗ್ ನಲ್ಲಿ ಪ್ರಥಮ ಸ್ಥಾನ

ಬೆಂಗಳೂರು: 2019 ನೇ ಸಾಲಿನ ಸಿಇಟಿ ಫ‌ಲಿತಾಂಶ ಶನಿವಾರ ಪ್ರಕಟವಾಗಿದ್ದು , ಇಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಜಫಿನ್‌ ಬಿಜು ಪ್ರಥಮ ರ್‍ಯಾಂಕ್‌ ಪಡೆದಿದ್ದಾರೆ. ಮಂಗಳೂರಿನ ಎಕ್ಸ್‌ಪರ್ಟ್‌ ಕಾಲೇಜಿನ ಆರ್‌ ಚಿನ್ಮಯ್‌ 2 ನೇ ರ್‍ಯಾಂಕ್‌ ಪಡೆದಿದ್ದಾರೆ.

ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಅವರು ಇಲಾಖೆಯ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಫ‌ಲಿತಾಂಶವನ್ನು ಬಿಡಗುಡೆ ಗೊಳಿಸಿದರು. ಟಾಪ್‌ 5 ರ್‍ಯಾಂಕ್‌ ಪಡೆದವರಿಗೆ ಉಚಿತ ಪ್ರವೇಶ ಎಂದು ಘೋಷಿಸಿದ್ದಾರೆ.

ಇಂಜಿನಿಯರಿಂಗ್‌ ವಿಭಾಗ
ಜಫಿನ್‌ ಬಿಜು-ಮೊದಲ ರ್‍ಯಾಂಕ್‌ – ಚೈತನ್ಯ ಟೆಕ್ನೋ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು.
ಮೊದಲ ಹತ್ತು ಸ್ಥಾನಗಳಲ್ಲಿ 7 ಬೆಂಗಳೂರು, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಬಳ್ಳಾರಿಗೆ ಲಭಿಸಿದೆ.

ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ

ಪಿ ಮಹೇಶ್‌ ಆನಂದ್‌- ಚೈತನ್ಯ ಟೆಕ್ನೋ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು ಮೊದಲ ರ್‍ಯಾಂಕ್‌.

ಮೊದಲ ಹತ್ತು ಸ್ಥಾನಗಳಲ್ಲಿ 6 ಬೆಂಗಳೂರು, 2 ಸ್ಥಾನ ಮಂಗಳೂರಿಗೆ ಮತ್ತು 1 ಸ್ಥಾನ ಮೈಸೂರಿಗೆ ಮತ್ತು 1 ಸ್ಥಾನ ದಾವಣಗೆರೆಗೆ ಲಭಿಸಿದೆ.

ಬಿಎಸ್ಸಿ ಕೃಷಿ 

ಕೀರ್ತನಾ ಎಂ.ಗೆ ಮೊದಲ ರ್‍ಯಾಂಕ್‌ – ಅರುಣ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಬೆಂಗಳೂರು.

ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 03, ಮಂಗಳೂರಿಗೆ 04, ಮೈಸೂರಿಗೆ 01, ಹಾಸನಕ್ಕೆ 01, ಶಿವಮೊಗ್ಗಕ್ಕೆ 01 ಸ್ಥಾನ ದೊರಕಿದೆ.

ಪಶುವೈದ್ಯಕೀಯ 

ಪಿ ಮಹೇಶ್‌ ಆನಂದ್‌ -ಚೈತನ್ಯ ಟೆಕ್ನೊ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು . ಮೊದಲ ರ್‍ಯಾಂಕ್‌

ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 08, ಮೈಸೂರಿಗೆ 01, ದಾವಣಗೆರೆಗೆ 01 ಸ್ಥಾನ ಬಂದಿರುತ್ತದೆ.

ಬಿ ಫಾರ್ಮಾ ಮತ್ತು ಫಾರ್ಮಾ ಡಿ

ಕು.ಸಾಯಿ ಸಾಕೇತಿಕ ಚಕುರಿ. ಶ್ರೀ ಚೈತನ್ಯ ಟೆಕ್ನೊ ಪಿಯು ಕಾಲೇಜ್‌ ಮಾರತಹಳ್ಳಿ ಬೆಂಗಳೂರು . ಮೊದಲ ರ್‍ಯಾಂಕ್‌

ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿಗೆ 07, ಮೈಸೂರಿಗೆ 01, ಬಳ್ಳಾರಿಗೆ01 ಸ್ಥಾನ ಬಂದಿರುತ್ತದೆ.

No Comments

Leave A Comment