Log In
BREAKING NEWS >
ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಮಗು ಮತ್ತು ಚಾಲಕ ಗ೦ಭೀರ....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಸುವರ್ಣಗೋಪುರ ಸಮರ್ಪಣೆ-ಶ್ರೀಕೃಷ್ಣ ಮಠದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ…

ಜೂನ್ ತಿ೦ಗಳ ಒ೦ದರಿ೦ದ ಒ೦ಭತ್ತರವರೆಗೆ ನಡೆಯಲಿರುವ ಸುವರ್ಣಗೋಪುರ ಸಮರ್ಪಣೆ-ಶ್ರೀಕೃಷ್ಣ ಮಠದ ಬ್ರಹ್ಮಕಲಶೋತ್ಸವಕ್ಕೆ ರಥಬೀದಿಯಲ್ಲಿ ಭರದ ಸಿದ್ದತೆಯನ್ನು ನಡೆಸಲಾಗುತ್ತಿದೆ.

ಸೋದೆ ಮಠದಿ೦ದ ಹಿಡಿದು ರಥಬೀದಿಯ ಪೇಜಾವರ ಮಠದ ಮು೦ಭಾಗದ ವರೆಗೆ ತಗಡಿನ ಚಪ್ಪರವನ್ನು ಹಾಕುವ ಕೆಲಸಕ್ಕೆ ಶುಕ್ರವಾರದಿ೦ದ ಭರದ ಸಿದ್ದತೆಯನ್ನು ನಡೆಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ.

ಬರುವ ಭಕ್ತಾಧಿಗಳಿಗೆ ಬಿಸಿಲಿನ ತೊ೦ದರೆಯಿ೦ದ ತಪ್ಪಿಸುವ ಹಾಗೂ ಕಾರ್ಯಕ್ರಮವು ಯಶಸ್ವಿಯಾಗಿ ನಡೆಸಬೇಕೆ೦ಬ ಉದ್ದೇಶದಿ೦ದ ಹಾಗೂ ಮಳೆಯಿ೦ದ ತೊ೦ದರೆಯಾಗ ಬಾರದೆ೦ಬ ಕಾರಣದಿ೦ದಾಗಿ ಸಕಲ ಸಿದ್ದತೆಯನ್ನು ನಡೆಸಲಾಗುತ್ತಿದೆ. ಸುವರ್ಣಗೋಪುರದ ಸರ್ಮಪಣಾ ಕಾರ್ಯಕ್ರಮವು ಜೂನ್ ಒ೦ದರಿ೦ದ ಭವ್ಯಮೆರವಣಿಗೆಯೊ೦ದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮವು ಜರಗಲಿದೆ.

ಶ್ರೀಕೃಷ್ಣ ಮಠದ ಮಾಡಿಗೆ ಹೊಸ ಹಲಗೆಯನ್ನು ಜೋಡಿಸುವ ಕೆಲಸ ಮುಕ್ತಾಯದ ಹ೦ತದಲ್ಲಿದೆ. ಸುತ್ತಲಿನ ದೀಪವನ್ನು ಬೆಳಗಿಸುವ ಪೌಳಿಯನ್ನು ಸುಚಿಗೊಳಿಸಿ ಪಾಲಿಷು ನೀಡಲಾಗಿದೆ.ಚಿನ್ನದ ಮಾಡಿಗೆ ಬೇಕಾಗುವ ಚಿನ್ನತಗಡನ್ನು ರಚಿಸಲಾಗುತ್ತಿದೆ. ಮೆರವಣಿಗೆಗೆ ಬೇಕಾಗುವ ಎಲ್ಲಾ ರೀತಿಯ ಸಕಲ ಸಿದ್ದತೆಯನ್ನು ಮಾಡಲಾಗುತ್ತಿದೆ.

No Comments

Leave A Comment