ಇಸ್ಲಾಮಾಬಾದ್ : ಪಾಕಿಸ್ಥಾನದ ವಾಯವ್ಯ ಬಲೂಚಿಸ್ಥಾನ ಪ್ರಾಂತ್ಯದಲ್ಲಿಂದು ಶುಕ್ರವಾರದ ಪ್ರಾರ್ಥನೆಯ ವೇಳೆ ಮಸೀದಿಯೊಂದನ್ನು ಗುರಿ ಇರಿಸಿ ನಡೆಸಲಾದ ಸ್ಫೋಟದಲ್ಲಿ ಕನಿಷ್ಠ ಒಬ್ಬ ಮೃತಪಟ್ಟು ಇತರ 12ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಪ್ರಾಂತೀಯ ರಾಜಧಾನಿ ಕ್ವೆಟ್ಟಾ ದ ಪಷ್ತೂನಾಬಾದ್ ಪ್ರದೇಶದಲ್ಲಿನ ರೆಹಮಾನಿಯಾ ಮಸೀದಿಯನ್ನು ಗುರಿ ಇರಿಸಿ ನಡೆಸಲಾದ ಬ್ಲಾಸ್ಟ್ ನ ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು.
ಸ್ಫೋಟವು ಭಾರೀ ಪ್ರಮಾಣದ್ದಾಗಿರುವುದರಿಂದ ಮೃತರ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳಲ್ಲಿ ಕ್ವೆಟ್ಟಾದ ಹಜಾರಿಗಂಜ್ ಪ್ರದೇಶದಲ್ಲಿನ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ನಡೆದಿದ್ದ ಬ್ಲಾಸ್ಟ್ನಲ್ಲಿ 20 ಮಂದಿ ಮಡಿದು ಇತರ 48 ಮಂದಿ ಗಾಯಗೊಂಡಿದ್ದರು.