Log In
BREAKING NEWS >
ಆಗಸ್ಟ್ 18ರ ಭಾನುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸಮೂಹಿಕ ಚೂಡಿಪೂಜೆ ನಡೆಯಲಿದೆ.ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಬಿಕಿನಿ ತೊಟ್ಟು ಮ್ಯೂಸಿಯಂನಲ್ಲಿ ಡ್ಯಾನ್ಸ್ ಮಾಡಿ ನಗೆಗೀಡಾದ ನಟಿ ಶ್ರೇಯ ಶರಣ್, ವಿಡಿಯೋ ವೈರಲ್!

ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯ ಶರಣ್ ಅವರು  ಮ್ಯೂಸಿಯಂವೊಂದರಲ್ಲಿ ಬಿಕಿನಿ ತೊಟ್ಟು ಡ್ಯಾನ್ಸ್ ಮಾಡಿ ನೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಕಳೆದ ವರ್ಷ ಮಾರ್ಚ್ ನಲ್ಲಿ ರಷ್ಯನ್ ಬಾಯ್ ಫ್ರೆಂಡ್ ಆ್ಯಂಡ್ರಿ ಕೊಸ್ಟಿವ್ ರನ್ನು ವಿವಾಹವಾಗಿದ್ದರು. ಆ್ಯಂಡ್ರಿ ಜೊತೆ ಮೋಜು ಮಸ್ತಿಯಲ್ಲಿ ತೊಡಗಿರುವ ಶ್ರೇಯ ಶರಣ್ ಲಂಡನ್ ಮ್ಯೂಸಿಯಂವೊಂದಕ್ಕೆ ಭೇಟಿ ನೀಡಿದ್ದಾರೆ. ಬಿಕಿನಿ ಮೇಲೆ ಪಾರದರ್ಶಕವಾದ ಗೌನ್, ಸನ್ ಗ್ಲಾಸ್ ಧರಿಸಿ ಫೋಟೋವೊಂದರ ಮುಂದೆ ವಿಚಿತ್ರವಾಗಿ ಡ್ಯಾನ್ಸ್ ಮಾಡಿದ್ದರು. 

 

 

ಶ್ರೇಯಾ ಡ್ಯಾನ್ಸ್ ವೇಳೆ ಫೋಟೋದಲ್ಲಿದ್ದ ಮನುಷ್ಯನ ಚಿತ್ರ ಕೋತಿ ರೂಪಕ್ಕೆ ಬದಲಾಗುತ್ತದೆ. ಈ ವಿಡಿಯೋವನ್ನು ಶ್ರೇಯ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ನೋಡಿದ ಕೆಲ ನೆಟಿಗರು ಅಪಹಾಸ್ಯ ಮಾಡುತ್ತಾ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

No Comments

Leave A Comment