Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಜಮ್ಮು ಕಾಶ್ಮೀರ: ಅನಂತ್ ನಾಗ್ ನಲ್ಲಿ ಮೂರನೇ ಸ್ಥಾನಕ್ಕಿಳಿದ ಮೆಹಬೂಬಾ ಮುಫ್ತಿ

ಅನಂತ್ ನಾಗ್: ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಾಶ್ಮೀರದ ಅನಂತ್ ನಾಗ್ ಕ್ಷೇತ್ರದದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಗುರುವಾರ ಪ್ರಕಟವಾಗಿರುವ ಲೋಕಸಭೆ ಚುನಾವಣೆ ಫಲಿತಾಶದಲ್ಲಿ ಅನಂತ್ ನಾಗ್ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನ ಹಸ್ನೈನ್ ಮಸೂದಿ  ಮುನ್ನಡೆ ಸಾಧಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಗುಲಾಮ್ ಅಹ್ಮದ್ ಮಿರ್ ಎರಡನೆಯ ಸ್ಥಾನದಲ್ಲಿದ್ದಾರೆ ಇವರು ಎನ್ಸಿ ಪಕ್ಷದ ಅಭ್ಯರ್ಥಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.

ಜಮ್ಮು ಮತ್ತು ಉಧಮ್ಪುರ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಎನ್.ಸಿ.ನ ಫಾರೂಕ್ ಅಬ್ದುಲ್ಲಾ ಶ್ರೀನಗರ ಕ್ಷೇತ್ರದಿಂದ ಮುನ್ನಡೆ ಸಾಧಿಸಿದ್ದಾರೆ.

No Comments

Leave A Comment