Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

ಜೆಟ್‌ ಏರ್‌ ವೇಸ್‌ ನೌಕರರ ವೇತನ ಪಾವತಿಗೆ ಹಣ ಕೊಡಲು ಸಾಧ್ಯವಿಲ: ಎಸ್‌ಬಿಐ

ಹೊಸದಿಲ್ಲಿ : ಭಾರೀ ಸಾಲ ಬಾಧೆಯಿಂದ ಮುಚ್ಚಿ ಹೋಗುವ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್‌ ಏರ್‌ ವೇಸ್‌ ವಿಮಾನಯಾನ ಸಂಸ್ಥೆ ಗೆ ಸಾಲ ಒದಗಣೆ ಕೂಟದ ನೇತೃತ್ವ ವಹಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಜೆಟ್‌ ಏರ್‌ ವೇಸ್‌ ಕಂಪೆನಿಯ ನೌಕರರ ವೇತನ ಪಾವತಿಗೆ ಹಣ ಒದಗಿಸಲು ತನಗೆ ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ಜೆಟ್‌ ಏರ್‌ ವೇಸ್‌ ಆಡಳಿತ ಮಂಡಳಿ ಮತ್ತು ನೌಕರರ ನಡುಉವಿನ ಸಂಘರ್ಷದಲ್ಲಿ ತಾನು ಶಾಮೀಲಾಗುವುದಿಲ್ಲ, ಏಕೆಂದರೆ ತಾನು ತನಿಖೆ ನಡೆಸುವ ಸಂಸ್ಥೆ ಅಲ್ಲ ಎಂದು ಎಸ್‌ಬಿಐ, ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ (ಆರ್‌ಎಲ್‌ಸಿ) ತಿಳಿಸಿದೆ ಎಂದು ಹಿಂದು ಬ್ಯುಸಿನೆಸ್‌ ಲೈನ್‌ ವರದಿ ಮಾಡಿದೆ.

ಜೆಟ್‌ ಏರ್‌ ವೇಸ್‌ ನಿರ್ವಹಣೆ ನಗದು ಹರಿವಿನ ಆಧಾರಿನಲ್ಲಿ ನಡೆಯುತ್ತಿರುವುದರಿಂದ ತಾನು ಅದಕ್ಕೆ ಕ್ರೆಡಿಟ್‌ (ಸಾಲ) ಸೌಕರ್ಯ ನೀಡಲಾರೆ ಎಂದು ಎಸ್‌ಬಿಐ ಹೇಳಿದೆ. ಕಳೆದ ಎಪ್ರಿಲ್‌ 17ರಂದು ಜೆಟ್‌ ಏರ್‌ ವೇಸ್‌ ತಾತ್ಕಾಲಿಕವಾಗಿ ತನ್ನ ವಾಯು ಸಾರಿಗೆ ಸೌಕರ್ಯವನ್ನು ನಿಲ್ಲಿಸಿರುವುದರಿಂದ ಅದೀಗ ಪರ್ಯಾಪ್ತ ಪ್ರಮಾಣದ ನಗದು ಹರಿವು ಉಂಟುಮಾಡುತ್ತಿಲ್ಲ ಎಂದು ಎಸ್‌ಬಿಐ ಹೇಳಿದೆ.

No Comments

Leave A Comment