Log In
BREAKING NEWS >
ಪ೦ಚ ಸ್ವಾಮೀಜಿಯವರ ದಿವ್ಯ ಹಸ್ತದಿ೦ದ ದೀಪ ಪ್ರಜ್ವಲನೆಯೊ೦ದಿಗೆ ಮುಷ್ಠಿ ಎಳ್ಳು ಸಮರ್ಪಣೆಯೊ೦ದಿಗೆ ಶ್ರೀಕೃಷ್ಣನದರ್ಶನಕ್ಕೆ ಚಾಲನೆ...ಡ್ರಗ್ಸ್ ದ೦ಧೆ ಪ್ರಕರಣ:ಇಬ್ಬರು ನಟಿಮಣಿಯರಿಗಿಲ್ಲ ಜಾಮೀನು ಭಾಗ್ಯ-ಸೆ.30ಕ್ಕೆ ಮತ್ತೆ ವಿಚಾರಣೆ

ದಿಲ್ಲಿ : ಶಂಕಿತ ಕ್ರಿಮಿನಲ್‌ ನಡೆಸಿದ ಮಾರಾಣಾಂತಿಕ ಹಲ್ಲೆಗೆ ಎಸ್‌ಐ ಸಾವು

ಹೊಸದಿಲ್ಲಿ : ಇಲ್ಲಿನ ಶಹದಾರಾ ವಿವೇಕ್‌ ವಿಹಾರ್‌ ನಲ್ಲಿ ಮೊನ್ನೆ ಭಾನುವಾರ ದಿಲ್ಲಿ ಪೊಲೀಸ್‌ ಎಸ್‌ಐ ರಾಜ್‌ಕುಮಾರ್‌ ಎಂಬವರ ಮೇಲೆ ಶಂಕಿತ ಕ್ರಿಮಿನಲ್‌ ಓರ್ವ ನಡೆಸಿದ ಮಾರಣಾಂತಿಕ ಹಲ್ಲೆಯಿಂದ ಎಸ್‌ಐ ಸಾವಪ್ಪಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಮನೋಜ್‌ ತಿವಾರಿ ಆಗ್ರಹಿಸಿದ್ದಾರೆ.

ಎಸ್‌ಐ ರಾಜ್‌ ಕುಮಾರ್‌ ಅವರು ಶಂಕಿತ ಕ್ರಿಮಿನಲ್‌ನ ಚಲನ ವಲನವನ್ನು ತಮ್ಮ ಫೋನಿನಲ್ಲಿ ವಿಡಿಯೋ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಯಿತು. ಪರಿಣಾಮವಾಗಿ ಎಸ್‌ಐ ಅನಂತರ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರಿಕ ಸಮಾಜದಲ್ಲಿ ಗೂಂಡಾಗಿರಿಗೆ ಮತ್ತು ನಗರ ನಕ್ಸಲಿಸಂ ಗೆ ಅವಕಾಶ ಇಲ್ಲ; ಎಸ್‌ ಐ ಸಾವಿನ ಬಗ್ಗೆ ಸರಿಯಾದ ತನಿಖೆ ಆಗಲೇಬೇಕು ಎಂದು ತಿವಾರಿ ಟ್ವಿಟರ್‌ ನಲ್ಲಿ ಆಗ್ರಹಿಸಿದ್ದಾರೆ.

No Comments

Leave A Comment