Log In
BREAKING NEWS >
ತಪ್ಪಿದ ಅನಾಹುತ: ಜಮ್ಮು ಕಾಶ್ಮೀರದಲ್ಲಿ 40 ಕೆಜಿ ಸ್ಫೋಟಕ ವಶ ಪಡೆದ ಸೇನೆ....

ಉಪ್ಪೂರು :ಲಾರಿಗೆ ಪಿಕ್‌ಅಪ್‌ ಢಿಕ್ಕಿ: ಓರ್ವ ಸಾವು

ಬ್ರಹ್ಮಾವರ: ಉಪ್ಪೂರು ಬಳಿ ರಾ.ಹೆ. 66ರಲ್ಲಿ ಲಾರಿಗೆ ಪಿಕ್‌ಅಪ್‌ ವಾಹನ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ರವಿವಾರ ಮುಂಜಾನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹನುಮಂತ (21) ಮೃತ ಪಟ್ಟವರು. ಪಿಕ್‌ಅಪ್‌ ಚಾಲಕ ಶಿವಾನಂದ ಗೊರವರ, ವಾಹನದಲ್ಲಿದ್ದ ಶುಭದತ್‌ ದಂಡು ಪಟ್‌, ಭೀಮನ ದಲಾಯಿ, ಪ್ರದೀಪ ದಲಾಯಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋಟೇಶ್ವರದ ಹಾಲ್‌ನಲ್ಲಿ ಮದುವೆ ಡೆಕೋರೇಶನ್‌ ಕೆಲಸ ಮುಗಿಸಿ ಅಂಬಲಪಾಡಿಯಲ್ಲಿರುವ ಕಚೇರಿಗೆ ಪಿಕ್‌ಅಪ್‌ ವಾಹನದಲ್ಲಿ ಬರುತ್ತಿದ್ದರು. ಈ ಸಂದರ್ಭ ನಿಯಂತ್ರಣ ತಪ್ಪಿ ರಸ್ತೆ ಬದಿ ಸೂಚನೆ ಇಲ್ಲದೆ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ವಾಹನ ಜಖಂಗೊಂಡಿದ್ದು, ಪಿಕ್‌ಅಪ್‌ ಎದುರಿನಲ್ಲಿ ಕುಳಿತಿದ್ದ ಹನು ಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮಂತಪ್ಪ ಕುಟುಂಬ ಉಡುಪಿ ಬನ್ನಂಜೆ ಬಳಿ ವಾಸವಿದ್ದು, ಶಿವಪ್ಪ ಹಾಗೂ ಲಕ್ಷ್ಮಮ್ಮ ದಂಪತಿಯ ಮೂವರು ಪುತ್ರರು, ಇಬ್ಬರು ಪುತ್ರಿಯರ ಪೈಕಿ ಕೊನೆಯವರು.ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment