Log In
BREAKING NEWS >
ಆಗಸ್ಟ್ 18ರ ಭಾನುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸಮೂಹಿಕ ಚೂಡಿಪೂಜೆ ನಡೆಯಲಿದೆ.ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಚಿಣ್ಣರೇ ಎಳೆಯಲಿದ್ದಾರೆ ಉಡುಪಿ ಬ್ರಹ್ಮರಥ – ಸುವರ್ಣ ಗೋಪುರ ಸಮರ್ಪಣೆಗೆ ಪೂರ್ವಭಾವಿ ಸಂಭ್ರಮ

ಉಡುಪಿ : ಪರ್ಯಾಯ ಪಲಿಮಾರು ಶ್ರೀಗಳ ಮಹತ್ವಾಕಾಂಕ್ಷಿ ಯೋಜನೆಯಾದ ಶ್ರೀಕೃಷ್ಣ ಮಠದ ಸುವರ್ಣ ಗೋಪುರ ಸಮರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಚಿಣ್ಣರ ಸಂತರ್ಪಣೆಯ ಶಾಲೆಗಳ 5 ಸಾವಿರ ಪುಟಾಣಿಗಳು ಬ್ರಹ್ಮರಥವನ್ನು ಎಳೆಯಲಿದ್ದಾರೆ.

ಜೂ. 3ರಂದು ಈ ದಾಖಲೆಯ ಕಾರ್ಯಕ್ರಮ ನಡೆಯಲಿದೆ. ಅಂದು ಚಿಣ್ಣರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಬಳಿಕ ಸಂಜೆ ರಥಬೀದಿಯಲ್ಲಿ ನಡೆಯಲಿರುವ ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲೆಯಲ್ಲಿ 120 ಚಿಣ್ಣರ ಸಂತರ್ಪಣೆಯ ಶಾಲೆಗಳಲ್ಲಿ 15,000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅವರಲ್ಲಿ 4ರಿಂದ 7 ತರಗತಿಯ ವರೆಗಿನ ಐದು ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜೂ.1ರಂದು ಕಲಶ ಮೆರವಣಿಗೆ
ಶ್ರೀ ಕೃಷ್ಣಮಠದ ಸುವರ್ಣ ಗೋಪುರದ ಸಮರ್ಪಣೆಗೆ ಪೂರ್ವಭಾವಿಯಾಗಿ ಜೂ. 1ರಂದು ಗರ್ಭಗುಡಿಯ ಸುವರ್ಣ ಲೇಪಿತ ಕಲಶಗಳನ್ನು ಜೋಡುಕಟ್ಟೆಯಿಂದ ಮೆರವಣಿಗೆಯ ಮೂಲಕ ಮಠಕ್ಕೆ ತರಲಾಗುತ್ತದೆ. ಜೂ. 6ರಂದು ಸುವರ್ಣ ಗೋಪುರದ ಪ್ರತಿಷ್ಠಾಪನೆ, ಜೂ. 9ರಂದು ಬ್ರಹ್ಮ ಕಲಶೋತ್ಸವ ನಡೆಯಲಿದೆ

No Comments

Leave A Comment