Log In
BREAKING NEWS >
ಉಡುಪಿ ನೂತನ ಡಿವೈಎಸ್ಪಿಯಾಗಿ ಸುಧಾಕರ್ ನಾಯಕ್ ಅಧಿಕಾರ ಸ್ವೀಕಾರ.....ಕೇಂದ್ರ ಬಜೆಟ್: ಜನವರಿ 30 ರಂದು ಸರ್ವಪಕ್ಷ ಸಭೆ ಕರೆದ ಪ್ರಧಾನಮಂತ್ರಿ ನರೇಂದ್ರ ಮೋದಿ....

ಸಿಡಿಲಾಘಾತಕ್ಕೆ ನಲುಗಿದ ಮಂಗಳೂರು ಗುಡುಗು ಸಹಿತ ಮಳೆಗೆ ಹಲವೆಡೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರವಿವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗೆ ಗುಡುಗು ಸಹಿತ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಮೂಡಬಿದ್ರೆ , ಪೂಂಜಲಕಟ್ಟೆ , ವೇಣೂರು ಮುಂತಾದ ಭಾಗಗಳಲ್ಲಿ ಲಘು ಮಳೆಯಾಗಿದ್ದರೆ, ಮಂಗಳೂರು, ಸುರತ್ಕಲ್, ಉಳ್ಳಾಲ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.

ಮನೆಮೇಲೆ ಕುಸಿದು ಬಿದ್ದ ತಡೆಗೋಡೆ

ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕ್ ನ ಜೈಸನ್ ಎಂಬವರ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಕಾಂಕ್ರೀಟ್ ತಡೆಗೋಡೆ ಮನೆ ಮೇಲೆ ಬಿದ್ದಿರುವ ಕಾರಣ ಒಂದು ಭಾಗದ ಗೋಡೆ, ಮನೆಯ ಆರ್ ಆರ್ ಸಿ ಯಲ್ಲಿ ಬಿರುಕು ಮೂಡಿದೆ. ಸುಮಾರು 15ರಿಂದ 18 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮರಕ್ಕೆ ಬಡಿದು ಮನೆಗೆ ಬಿದ್ದ ಸಿಡಿಲು ಬೆಂಕಿ ಉಂಡೆ

 ಸುರತ್ಕಲ್ ತಂಡಂಬೈಲ್ ನಿವಾಸಿ ಉಷಾ ಭಾಸ್ಕರ್ ಅವರ ಮನೆಗೆ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ರವಿವಾರ ಮಧ್ಯರಾತ್ರಿ ಸಮಯದಲ್ಲಿ ಮನೆ ಬಳಿಯ ತೆಂಗಿನ ಮರಕ್ಕೆ ಮೊದಲು ಸಿಡಿಲು ಬಡಿದಿತ್ತು. ನಂತರ ಮರದಿಂದ ಬೆಂಕಿಯ ಉಂಡೆ ಮನೆಯ ಮೇಲೆ ಬಿದ್ದಿದೆ. ಮನೆಯ ಸಿಮೆಂಟ್ ಶೀಟ್ ಹಾಸು, ಗೋಡೆಯಲ್ಲಿ ಬಿರುಕು ಬಿದ್ದಿದೆ. ವಯರಿಂಗ್ ಕಿತ್ತು ಬಿದ್ದಿದ್ದು, ಅಪಾರ ಪ್ರಮಾಣದ ಹನಿ ಉಂಟಾಗಿದೆ. ಈ ಸಂದರ್ಭದಲ್ಲಿ ಮನೆಯೊಳಗೆ ಮಗು ಸೇರಿ ನಾಲ್ಕು ಮಂದಿ ಇದ್ದರು. ಸಿಡಿಲಾಘಾತದಿಂದ ಕರುಣಾಕರ ಎಂಬವರ ಕೈ ಗೆ ಗಾಯವಾಗಿದೆ.


ಸ್ಥಳಕ್ಕೆ ಕಂದಾಯ ಅಧಿಕಾರಿ ನವೀನ್ ಭೇಟಿ ನೀಡಿ ಪರಿಹಾರದ ತನಿಖೆ ನಡೆಸಿದರು, ಬಿಜೆಪಿ ಸ್ಲಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ದೇವಾಡಿಗ ಇಡ್ಯಾ ತೆರಳಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಹಾರ ನೀಡಿದರು.

ಉಳ್ಳಾಲ : ಮನೆಗೆ ಬಡಿದ ಸಿಡಿಲು

ಇಲ್ಲಿನ ಇರಾ ಗ್ರಾಮದ ಕೆಂಜಿಲ ಬಂಡಶಾಲೆ ಪದ್ಮನಾಭ ಎಂಬವರ ಮನೆಗೆ ಸೋಮವಾರ ಮುಂಜಾನೆ ಸಿಡಿಲು ಬಡಿದಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸಿಡಿಲಿನ ಆಘಾತಕ್ಕೆ ಮನೆಯ ವಯರಿಂಗ್ ಎಲ್ಲಾ ಕಿತ್ತು ಹೋಗಿದ್ದು, ಗೋಡೆಯ ಮಣ್ಣು ಮನೆಯೊಳಗೆ ಬಿದ್ದಿದೆ. ಮನೆಯಲ್ಲಿ ಮೂವರು ವಾಸ್ತವ್ಯವಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

No Comments

Leave A Comment