Log In
BREAKING NEWS >
ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಮಗು ಮತ್ತು ಚಾಲಕ ಗ೦ಭೀರ....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಸೇನೆಯ ರಹಸ್ಯ ಮಾಹಿತಿ ಚೀನಾಕ್ಕೆ ಮಾರಿದ ಮಾಜಿ ಸಿಐಎ ಅಧಿಕಾರಿಗೆ 20 ವರ್ಷ ಜೈಲು

ವಾಷಿಂಗ್ಟನ್:ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ(ಸಿಐಎ) ಮಾಜಿ ಅಧಿಕಾರಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಚೀನಾದ ಗುಪ್ತಚರ ಏಜೆಂಟ್ ಗೆ ಅಮೆರಿಕದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು 25 ಸಾವಿರ ಅಮೆರಿಕನ್ ಡಾಲರ್ ಗೆ ಮಾರಾಟ ಮಾಡಿದ ಆರೋಪದಡಿ ಸಿಐಎ ಮಾಜಿ ಅಧಿಕಾರಿ ಕೇವಿನ್ ಮಾಲೋರೈ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು.

ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಶತ್ರು ರಾಷ್ಟ್ರದ ಗುಪ್ತಚರ ಅಧಿಕಾರಿಗೆ ನೀಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೇವಿನ್ ಗೆ 20 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಅಸಿಸ್ಟೆಂಟ್ ಅಟಾರ್ನಿ ಜನರಲ್ ಜಾನ್ ಡೇಮೆರ್ಸ್ ತಿಳಿಸಿದ್ದಾರೆ.

ಸಿಐಎನ ಮಾಜಿ ಅಧಿಕಾರಿಗಳನ್ನು ಚೀನಾ ಗುರಿಯಾಗಿರಿಸಿಕೊಂಡು ಈ ರೀತಿ ಮಾಹಿತಿ ಕಳವು ಮಾಡುತ್ತಿರುವ ಟ್ರೆಂಡ್ ಎಚ್ಚರಿಕೆ ಕರೆಗಂಟೆಯಾಗಿದೆ. ಇದು ದೇಶದ್ರೋಹದ ಕೃತ್ಯವಾಗಿದೆ ಎಂದು ಅಮೆರಿಕ ಹೇಳಿದೆ.

No Comments

Leave A Comment