Log In
BREAKING NEWS >
ಬ್ಯಾಂಕ್ ನಲ್ಲಿ ಸೀಕ್ರೆಟ್ ಲಾಕರ್ ಹೊಂದಿದ್ದ ಬಾಂಬರ್ ಆದಿತ್ಯ ರಾವ್...ಚೀನಾದಲ್ಲಿ ಕರೋನ ವೈರಸ್‌ ಮಹಾಮಾರಿ: ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ ಮಾರಣಾಂತಿಕ ಕಾಯಿಲೆಗೆ ಬಲಿ...

ಮಿಜಾರು: ಮಧ್ಯರಾತ್ರಿ ಹೊಟೇಲ್ ಎದುರು ಯುವಕನ ಕಗ್ಗೊಲೆ

ಮಿಜಾರು: ಯುವಕರ ಮಾತಿನ ಚಕಮಕಿ ಕೊಲೆಯಲ್ಲಿಅಂತ್ಯವಾದ ಘಟನೆ ಶುಕ್ರವಾರ ತಡರಾತ್ರಿ ಮೂಡಬಿದ್ರೆ ಸಮೀಪದ ಮಿಜಾರು ಧೂಮದ ಚಡವು ಎಂಬಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ನವೀನ್ ಭಂಡಾರಿ  ಎಂದು ಗುರುತಿಸಲಾಗಿದೆ.

ಶುಕ್ರವಾರ ತಡರಾತ್ರಿ ಮಿಜಾರು ಧೂಮದ ಚಡವು ಎಂಬಲ್ಲಿ ಹೊಟೇಲ್ ಎದುರು ಎಡಪದವು ಪಲ್ಕೆ ನಿವಾಸಿಯಾದ ನವೀನ್ ಮತ್ತು ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.

ಇಬ್ಬರು ಯುವಕರು ದೊಣ್ಣೆ ಮತ್ತು ಮಾರಕಾಯುಧಗಳಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನವೀನ್ ರನ್ನು ಸ್ಥಳದಲ್ಲೇ ಬಿಟ್ಟು ಯುವಕರು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಕೊಲೆಗೈದ ಆರೋಪಿಗಳು ಸ್ಥಳೀಯರೇ ಎಂದು ಮಾತುಗಳು ಕೇಳಿ ಬರುತ್ತಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.  ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

No Comments

Leave A Comment