ಮಂಗಳೂರು: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ ಜಪ್ತಿ ಮಂಗಳೂರು: ನಗರದ ರಥಬೀದಿಯಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ದಾಖಲೆಯಿಲ್ಲದ 1 ಕೋಟಿ ರೂಪಾಯಿ ಹಣವನ್ನು ಶುಕ್ರವಾರ ಬೆಳಗ್ಗೆ ಜಪ್ತಿ ಮಾಡಿದ್ದಾರೆ. ಬಂದರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಸ್ನಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ವೇಳೆ ಹಣದ ಬ್ಯಾಗ್ ಸಮೇತ ಮಂಜುನಾಥ್ ಎನ್ನುವನನ್ನು ವಶಕ್ಕೆ ಪಡೆಯಲಾಗಿದೆ. ಪತ್ತೆಯಾದ ಹಣ ಹವಾಲಾ ಹಣ ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದು, ಜ್ಯುವೆಲ್ಲರಿ ವ್ಯವಹಾರಕ್ಕಾಗಿ ತರಲಾಗುತ್ತಿತ್ತು ಎನ್ನಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. Share this:TweetWhatsAppEmailPrintTelegram