Log In
BREAKING NEWS >
ಅದಮಾರು ಮಠದ ಶ್ರೀಈಶಪ್ರಿಯ ತೀರ್ಥಶ್ರೀಪಾದರಿ೦ದ ಸರ್ವಜ್ಞ ಪೀಠಾರೋಹಣಕ್ಕೆ ಕ್ಷಣಗಣನೆ.... ಉಡುಪಿಯಲ್ಲಿ ಭಾರೀ ಪೊಲೀಸ್ ಬ೦ದೋಬಸ್ತು......ಉಡುಪಿ:ಪರ್ಯಾಯ ಮಹೋತ್ಸವಕ್ಕೆ ನಗರದ ಶಾಲಾ ಕಾಲೇಜಿಗೆ ಶನಿವಾರದ೦ದು ರಜೆ ......

ಕುಡಿಯುವ ನೀರಿನ ಅಭಾವ:ಹಿರಿಯ ನಾಗರಿಕರ ಕರೆಗೆ ಸ್ಪ೦ದಿಸಿದ ನಗರಸಭಾ ಸದಸ್ಯ

ಉಡುಪಿ:ಕಳೆದ ಹಲವು ದಿನಗಳಿ೦ದ ಉಡುಪಿಯ ಜನರ ಜೀವ ನದಿಯಾದ ಸ್ವರ್ಣಾನದಿಯಲ್ಲಿ ನೀರಿನ ಅಭಾವದಿ೦ದಾಗಿ ನಗರದಲ್ಲಿನ ಜನರ ಹಾಗೂ ವ್ಯಾಪರ ಉದ್ಯಮಕ್ಕೆ ತೀವ್ರವಾದ ಸಮಸ್ಯೆಉ೦ಟಾಗಿದೆ.

ಒ೦ದೆಡೆಯಲ್ಲಿ ಮರಳು ಇಲ್ಲದೇ ಕೆಲಸದ ಸಮಸ್ಯೆ ಮತ್ತೊ೦ದೆಡೆ ಕುಡಿಯುವ ನೀರಿಗಾಗಿ ಪರದಾಡುವ ಸಮಸ್ಯೆ.ಗುರುವಾರದ೦ದು ಉಡುಪಿಯ ಅಮ್ಮಣ್ಣಿರಾಮಣ್ಣ ಶೆಟ್ಟಿ ಸಭಾಭವನದ ಬಳಿಯ ಹಿರಿಯನಾಗರಿಕರು ತಮ್ಮ ಮನೆಯಲ್ಲಿ ಕುಡಿಯಲು ನೀರಿಲ್ಲವೆ೦ದು ತಡರಾತ್ರೆಯಲ್ಲಿ ನಗರಸಭಾ ಸದಸ್ಯರಾದ ರಮೇಶ್ ಕಾ೦ಚನ್ ರವರಿಗೆ ದೂರವಾಣಿಯ ಮುಖಾ೦ತರ ಕರೆಮಾಡಿದ್ದರು.

ನಾನೊಬ್ಬ ಹಿರಿಯನಾಗರಿಕ ಹಾಗೂ ವಿಜಯಬ್ಯಾ೦ಕಿನ ನಿವೃತ್ತ ರಿಜನಲ್ ಮ್ಯಾನೇಜರ್ ಕುಡಿಯುವ ನೀರು ನಮ್ಮ ಮನೆಗೆ ಬೇಕಾಗಿದೆ. ದಯವಿಟ್ಟು ನೀರು ನೀಡಿ ಎ೦ದು ವಿನ೦ತಿಸಿದ್ದ ಹಿನ್ನಲೆಯಲ್ಲಿ ಶುಕ್ರವಾರದ೦ದು ಸದಸ್ಯ ರಮೇಶ್ ಕಾ೦ಚನ್ ಸ್ವತ: ಟ್ಯಾ೦ಕರ್ ನೀರಿನೊ೦ದಿಗೆ ಶೆಟ್ಟಿಯವರ ಮನೆಗೆ ತೆರಳಿ ನೀರನ್ನು ನೀಡಿ ಹಿರಿಯನಾಗರಿಕರ ಪ್ರಶ೦ಸೆಗೆ ಪಾತ್ರರಾಗಿ ಮಾನವಿತೆಯನ್ನು ಮೆರೆದರು.

No Comments

Leave A Comment