Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಮೈಸೂರಿನಲ್ಲಿ ಶೂಟೌಟ್‌ ; ಮುಂಬಯಿ ಮೂಲದ ದಂಧೆಕೋರ ಸಾವು

ಮೈಸೂರು: ನಗರದಲ್ಲಿ ಗುರುವಾರ ಮನಿ ಡಬ್ಲಿಂಗ್‌ ದಂಧೆಕೋರರನ್ನು ಗುರಿಯಾಗಿರಿಸಿಕೊಂಡು ಪೊಲೀಸರು ಶೂಟೌಟ್‌ ನಡೆಸಿದ್ದು ಮುಂಬೈ ಮೂಲದ ಓರ್ವ ದಂಧೆಕೋರ ಸಾವನ್ನಪ್ಪಿದ್ದಾನೆ.

ಹೆಬ್ಟಾಳ್‌ ರಿಂಗ್‌ ರಸ್ತೆಯ ಬಳಿಯಿರುವ ಅಪಾರ್ಟ್‌ಮೆಂಟ್‌ ಮೇಲೆ ವಿಜಯನಗರ ಪೊಲೀಸರು ಕಾರ್ಯಾಚರಣೆನಡೆಸಿದ್ದಾರೆ. ಈ ವೇಳೆ ಪೊಲೀಸರ ಗುಂಡು ತಗುಲಿ ಓರ್ವ ಸಾವನ್ನಪ್ಪಿದ್ದಾನೆ. ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಗನ್‌ಗಳ ಸಹಿತ ದಂಧೆಕೋರರು ಪರಾರಿಯಾಗಿರುವ ಹಿನ್ನಲೆಯಲ್ಲಿ ಮೈಸೂರಿನ ವಿವಿಧೆಡೆ ನಾಕಾಬಂಧಿ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.

ಹತ್ಯೆಗೀಡಾದ ದಂಧೆಕೋರನ ಮೃತದೇಹವನ್ನು ಕೆ.ಆರ್‌ .ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯ ಬಳಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment