Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ತಮಿಳುನಾಡು: ಮನೆಯಲ್ಲಿ ಏರ್ ಕಂಡಿಷನ್ ಸ್ಫೋಟಗೊಂಡು ಮೂವರು ಸಾವು

ಚೆನ್ನೈ: ಮನೆಯಲ್ಲಿನ ಏರ್ ಕಂಡಿಷನ್(ಎಸಿ) ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ತಮಿಳುನಾಡಿನ ತಿಂಡಿವಾನಂ ಸಮೀಪ ನಡೆದಿದೆ.

ತಿಂಡಿವಾನಂ ಸಮೀಪದ ಕಾವೇರಿಪಕ್ಕಮ್ ನ ರಾಜು(60), ಆತನ ಪತ್ನಿ(55) ಹಾಗೂ ಮಗ(26) ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಕೋಣೆಯೊಂದರಲ್ಲಿ ರಾತ್ರಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಏರ್ ಕಂಡಿಷನ್ ಸ್ಫೋಟಗೊಂಡಿದ್ದು, ಬಳಿಕ ಬೆಂಕಿ ಬೆಡ್ ರೂಮ್ ಗೆ ಆವರಿಸಿದ ಪರಿಣಾಮ ಮೂವರು ಸಜೀವ ದಹನವಾಗಿದ್ದಾರೆ.

ಪೊಲೀಸರು ಹಾಗೂ ಅಗ್ನಿ ಶಾಮಕ ದಳದವರು ಘಟನಾ ಸ‍್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.

No Comments

Leave A Comment