Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ದೇವೇಗೌಡರು ಇನ್ನಷ್ಟು ದಿನ ಪ್ರಧಾನಿಯಾಗಿದ್ದಿದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು: ಪೇಜಾವರ ಶ್ರೀ

ಉಡುಪಿ: 10 ತಿಂಗಳು ಪ್ರಧಾನಿಯಾಗಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಇನ್ನಷ್ಟು ದಿನ ಪ್ರಧಾನಿಯಾಗಿ ಮುಂದುವರಿದ್ದದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ಮಂಗಳವಾರ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.

ಇಂದು ಗೋವಿಂದ ಕಲ್ಯಾಣ ಮಂಟಪದಲ್ಲಿ ತಮ್ಮನ್ನು ಭೇಟಿಯಾದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಚೆನ್ನಮ್ಮ ದಂಪತಿಯನ್ನು ಅನುಗ್ರಹಿಸಿ ಮಾತನಾಡಿದರ ಶ್ರೀಗಳು, ನಿಷ್ಕಳಂಕ, ಪ್ರಾಮಾಣಿಕ ಭಗವದ್ಭಕ್ತ ರಾಜಕಾರಣಿಯಾದ ದೇವೇಗೌಡರು ಪ್ರಧಾನಿಯಾಗಿದ್ದಾಗ ಉತ್ತಮ ಕೆಲಸಗಳ ಜತೆಗೆ ಹಲವು ಸಮಸ್ಯೆ ಬಗೆಹರಿಸಿದ್ದು, ಅವರೊಬ್ಬ ಉತ್ತಮ ಮುತ್ಸದ್ಧಿ. ರೈತ ಪರ ಹೋರಾಟಗಾರ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೊಳೆನರಸೀಪುರದಲ್ಲಿ ತಮ್ಮನ್ನು ಭೇಟಿಯಾಗಿ ಜೈಲಿಗೆ ತೆರಳಿದ್ದರು ಎಂದರು.

ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ದಿಲ್ಲಿಯಲ್ಲಿ ಮಠದ ವಿವಿಧ ಯೋಜನೆ, ಅಭಿವೃದ್ಧಿ ಕಾರ್ಯಗಳಿಗಾಗಿ ಜಾಗ ನೀಡಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ದೇವೇಗೌಡ ಅವರು ಕುಟುಂಬ ಸಮೇತ ಶ್ರೀಕೃಷ್ಣಮಠದಿಂದ ಗೋವಿಂದ ಕಲ್ಯಾಣ ಮಂಟಪಕ್ಕೆ ಬಂದಿಳಿದಾಗ ಅವರನ್ನು ಮಲ್ಲಿಗೆ ಹೂವಿನ ಹಾರ ಹಾಕಿ ಶಂನ ಸೂಕ್ತ ಪಠಣದೊಂದಿಗೆ ಸ್ವಾಗತಿಸಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ, ಶ್ರೀ ಕೃಷ್ಣಮಠದಲ್ಲಿ ಪೂಜೆ ಜತೆಗೆ 89ನೇ ಹುಟ್ಟು ಹಬ್ಬ ಸಂಭ್ರಮದಲ್ಲಿರುವ ಪೇಜಾವರ ಶ್ರೀಗಳಿಗೆ ಗೌರವ ಸಲ್ಲಿಸಲು ಬಂದಿದ್ದೇನೆ, ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದೇನೆ, ನೋ ಪೊಲಿಟಿಕ್ಸ್ ಎಂದು ಹೇಳಿದರು.

No Comments

Leave A Comment