Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಬೆಂಗಳೂರು:1 ಕೆಜಿ ಚಿನ್ನ ಸಹಿತ 3 ಖತರ್ನಾಕ್‌ ಕಳ್ಳರು ಅರೆಸ್ಟ್‌

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿದ ಬೆಂಗಳೂರಿನ ಕೆ.ಪಿ.ಅಗ್ರಹಾರ ಪೊಲೀಸರು ಮೂವರು ಖತರ್ನಾಕ್‌ ಮನೆಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರ ಬಳಿಕ ಸುಮಾರು 1 ಕೆಜಿ 119 ಗ್ರಾಂ ಕಳವುಗೈಯಲಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರು ಗೋಪಿ, ರಾಜಾ ಅಲಿಯಾಸ್‌ ಜಪಾನ್‌ ರಾಜಾ ಮತ್ತು ಡೇವಿಡ್‌ ಎನ್ನುವವರಾಗಿದ್ದಾರೆ.

ಬಂಧಿತರು ಹಲವು ಕಡೆಗಳನ್ನು ಮನೆ ಬಾಗಿಲುಗಳನ್ನು ಮುರಿದು ಚಿನ್ನಾಭರಣಗಳನ್ನು ಕಳವುಗೈದಿದ್ದರು.

ವಶಪಡಿಸಿಕೊಳ್ಳಲಾದ 35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನುಮಾಲೀಕ ರುಗಳಿಗೆ ಹಿಂತಿರುಗಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.

ಬಂಧಿತ ರಾಜಾನಿಗೆ ಇಬ್ಬರು ಪತ್ನಿಯರಿದ್ದು ಇವರನ್ನೂ ಚಿನ್ನಾಭಾರಣ ಮಾರಾಟ ಮಾಡಲು ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

No Comments

Leave A Comment